Home ಜಿಲ್ಲೆ ಮಂಗಳೂರು ವಾದಿರಾಜ ವಾಲಗ ಮಂಡಳಿ: ಚಿತ್ರೀಕರಣ ಪೂರ್ಣ; ಆಗಸ್ಟ್ ನಲ್ಲಿ ಬಿಡುಗಡೆ: ಡಾ.ರಾಜೇಂದ್ರ ಕುಮಾರ್

ವಾದಿರಾಜ ವಾಲಗ ಮಂಡಳಿ: ಚಿತ್ರೀಕರಣ ಪೂರ್ಣ; ಆಗಸ್ಟ್ ನಲ್ಲಿ ಬಿಡುಗಡೆ: ಡಾ.ರಾಜೇಂದ್ರ ಕುಮಾರ್

ಮಂಗಳೂರು: “ವಾದಿರಾಜ ವಾಲಗ ಮಂಡಳಿ” ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
“ಎಮ್.ಎನ್.ಆರ್.ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಯಮಯ ಕನ್ನಡ ಚಲನಚಿತ್ರ ವಿಭಿನ್ನ ಕಥಾ, ವಿಶಿಷ್ಟ ಶೀರ್ಷಿಕೆ ಹಾಗೂ ಕಲಾವಿದರ ಹೊಸ ಗೆಟಪ್ ಪ್ರಮುಖ ಆಕರ್ಷಣೆಗಳಾಗಿವೆ. ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ಸದಾ ಸ್ವಾಗತಾರ್ಹವಾಗಿದ್ದು. “ವಾದಿರಾಜ ವಾಲಗ ಮಂಡಳಿ” ಕೂಡ ಅದೇ ದಾರಿಯಲ್ಲಿ ಗಮನ ಸೆಳೆಯುತ್ತಿದೆ. ಹಾಗಾಗಿ ಸಿನಿಪ್ರೇಮಿಗಳಲ್ಲಿ ಈಗಾಗಲೇ ಕುತೂಹಲ ಹಾಗೂ ನಿರೀಕ್ಷೆಯನ್ನು ಹೆಚ್ಚಿಸಿದೆ.
“ವರಾಹ ರೂಪಂ” ಹಾಡಿನ ಖ್ಯಾತಿಯ ಶಶಿರಾಜ್ ಕಾವೂರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರು ಕಥೆ, ಚಿತ್ರಕತೆ ಮತ್ತು ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಸಿನಿಮಾ. ಸುಮಾರು ೫೦ ದಿನಗಳ ಕಾಲ ಎರಡು ಹಂತಗಳಲ್ಲಿ ಚಿತ್ರೀಕರಣ ಮುಗಿಸಿದೆ. ಈಗ ಸಂಕಲನ. ಹಿನ್ನೆಲೆ ಸಂಗೀತ ಮತ್ತು ಡಬ್ಬಿಂಗ್ ಕೆಲಸಗಳಲ್ಲಿ ಶಶಿರಾಜ್ ನಿರತರಾಗಿದ್ದಾರೆ. ಕರಾವಳಿ ಕನ್ನಡದ ಸೊಗಡಿದರೂ. ರಾಜ್ಯದ ಎಲ್ಲ ಭಾಗದ ಪ್ರೇಕ್ಷಕರಿಗೂ ಈ ಸಿನಿಮಾ ತಲುಪುತ್ತದೆ ಎಂಬ ವಿಶ್ವಾಸ ಇದೆ. ಚಿತ್ರವು ಹಾಸ್ಯ, ಭಾವನಾತ್ಮಕ ಅಂಶಗಳು ಮತ್ತು ಸಾಮಾಜಿಕ ಹಿನ್ನೆಲೆ ಒಟ್ಟುಗೂಡಿಸಿ ಮನೋರಂಜನಾ ಪ್ಯಾಕೇಜ್ ಆಗಿದ್ದು. ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರು ಕುಟುಂಬ ಸಮೇತ ನೋಡಬಹುದಾದ ಹಾಸ್ಯಮಯ ಸಿನಿಮಾ ಆಗಿ ರೂಪುಗೊಂಡಿದೆ. ಈ ಸಿನಿಮಾವನ್ನು ತಮಿಳು. ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಚನೆಯೂ ಇದೆ ಎಂದವರು ತಿಳಿಸಿದ್ದಾರೆ.
ಚಿತ್ರದಲ್ಲಿ ಕರಾವಳಿಯ ಪ್ರತಿಭಾವಂತ ಹಾಗೂ ಜನಪ್ರಿಯ ಕಲಾವಿದರ ಸಮೂಹವಿದೆ. ಗುಂಡುಮಾಮ ಖ್ಯಾತಿಯ ನವೀನ್ ಪಡೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ವಿಶೇಷ ಅಭಿನಯದ ಮೂಲಕ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ. ಪ್ರಸ್ತುತ ಬಹು ಬೇಡಿಕೆಯಲ್ಲಿರುವ ಪ್ರಕಾಶ್ ತುಮಿನಾಡು, ಮೈಮ್ ರಾಮದಾಸ್. ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೊಳ್ಳಾರ್ ವಿಭಿನ್ನ ಪಾತ್ರಗಳಲ್ಲಿ ಹಾಸ್ಯದ ಹೊನಲನ್ನು ಹರಿಸಲಿದ್ದಾರೆ. ಅರ್ಜುನ್ ವೇದಾಂತ ಮತ್ತು ಅಥರ್ವ ಪ್ರಕಾಶ್ ನಾಯಕ ನಟರಾಗಿ ಅಭಿನಯಿಸಿದ್ದು ತನ್ನಿ ರಾವ್ ಮತ್ತು ವೇನ್ಯ ರೈ ನಾಯಕಿಯರಾಗಿ ಚಿತ್ರಕ್ಕೆ ಗ್ಲಾಮರ್ ಜೊತೆಗೆ ಭಾವನಾತ್ಮಕ ಸ್ಪರ್ಶ ನೀಡಲಿದ್ದಾರೆ. ಇದಲ್ಲದೆ ಲಕ್ಷ್ಮಣ ಕುಮಾರ್ ಮಲ್ಲೂರು ಸೇರಿದಂತೆ ಹಲವಾರು ಅನುಭವಿ ನಟರು ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ “ಂಡಿಡಿi ಐಈ” ಅನ್ನುವ ವಿಶೇಷವಾದ ಕ್ಯಾಮೆರಾ ಬಳಸಲ್ಪಟ್ಟಿದೆ. ಈ ಕ್ಯಾಮೆರಾ ಕಾಂತಾರ, ಪೊಗರು ಮುಂತಾದ ಬಿಗ್ ಬಜೆಟ್ ಸಿನಿಮಾಗಳಿಗೆ ಉಪಯೋಗಿಸಿ ಲ್ಪಟ್ಟಿದೆ. ತಮಿಳು ಚಲನಚಿತ್ರದ ಅನುಭವಿ ಛಾಯಾ ಚಿತ್ರಗಾರ ಎಸ್. ಚಂದ್ರಶೇಖರನ್ ಕ್ಯಾಮೆರದಲ್ಲಿ ಕೈಚಳಕ ತೋರಿಸಿದ್ದಾರೆ. “ಸವಾರಿ” ಚಿತ್ರದ ಮೂಲಕ ಖ್ಯಾತ ರಾದ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನ ಮಾಡಿದ್ದು, ಹಾಡುಗಳಿಗೆ ವಿಶೇಷ ರಂಜನೆ ನೀಡಲಿದ್ದಾರೆ. ಸ್ಟಂಟ್ ಮಾಸ್ಟರ್ ಟೈಗರ್ ಶಿವು ಸಾಹಸ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಾಯಿ ವಿಘ್ನಶ್. ಮೈಮ್ ರಾಮದಾಸ್ ಸೇರಿದಂತೆ ಹಿಂದಿ ಚಿತ್ರರಂಗದ ಪ್ರಮುಖ ಗಾಯಕರು ತಮ್ಮ ಧ್ವನಿಯಿಂದ ಹಾಡುಗಳಿಗೆ ಜೀವ ತುಂಬಲಿದ್ದಾರೆ.
ಕರಾವಳಿ ಭಾಷೆಯ ನೈಜತೆಯನ್ನು ಉಳಿಸಿಕೊಂಡು. ಅದನ್ನು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗುವಂತೆ “ವಾದಿರಾಜ ವಾಲಗ ಮಂಡಳಿ” ಹಾಸ್ಯಮಯ ಸಿನಿಮಾ ಚಿತ್ರಿಕರಣಗೊಂಡಿದ್ದು, ರಾಜ್ಯಾದ್ಯಂತ ಬಿಡುಗಡೆ ಯಾಗಲಿದೆ ಎಂದು ಡಾ.ಎಂ. ಎನ್. ರಾಜೇಂದ್ರಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಿತ್ರ ತಂಡದಲ್ಲಿರುವ ಪ್ರಮುಖರಾದ ಶಶಿರಾಜ್ ಕಾವೂರು, ಲಕ್ಷ್ಮಣ ಮಲ್ಲೂರು, ಮಣಿಕಾಂತ್ ಕದ್ರಿ, ಅರ್ಜುನ್ ವೇದಾಂತ್,ವೇನ್ಯ ರೈಮೈಮ್ ರಾಮ್ ದಾಸ್,ರಾಜೇಶ್ ಕುಡ್ಲಾ, ಗೋಪಿನಾಥ್ ಭಟ್ ,ಮೇಘ ರಾಜ್ ಮೊದಲಾದವರು ಉಪಸ್ಥಿತರಿದ್ದರು.