ಮಾ.7ರಿಂದ ಕಬ್ಬಡಿ ಪದ್ಯಾವಳಿ

ಸಂಜೆವಾಣಿ ನ್ಯೂಸ್
ಮೈಸೂರು:ಮಾ.1:-
ಮೈಸೂರು ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್.ರಾಕೇಶ್‍ಗೌಡ ಹುಟ್ಟು ಹಬ್ಬದ ಅಂಗವಾಗಿ ಮಾ.7ಮತ್ತು 8ರಂದು ರಾಜ್ಯಮಟ್ಟದ 30 ಯಾರ್ಡ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಲೋಹಿತ್ ತಿಳಿಸಿದರು.


ನಗರದ ಪತ್ರಕರ್ತ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಟಲ್ ಜೀ ಪ್ರೀಮಿಯರ್ ಲೀಗ್ ಕನ್ನೇಗೌಡನ ಟೈಗರ್ಸ್ ವತಿಯಿಂದ, ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ನಗರದ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀ ಮರುಳೇಶ್ವರ ದೇವಸ್ಥಾನದ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ಬಹುಮಾನವಿದ್ದು, ಪ್ರಥಮ ಸ್ಥಾನಕ್ಕೆ 75.ಸಾವಿರ ರೂ., ದ್ವಿತೀಯ 50.ಸಾವಿರ ರೂ., ತೃತೀಯ ಬಹುಮಾನವಾಗಿ 25.ಸಾವಿರ ರೂ. ಗಳನ್ನು ನೀಡಲಾಗುವುದು. ಪ್ರತಿ ತಂಡಕ್ಕೆ 5000ರೂ. ಪ್ರವೇಶ ಶುಲ್ಕವಿರುತ್ತದೆ. ನಿಯಮ ಮತ್ತು ಸೂಚನೆಗಳಿದ್ದು, 5 ಓವರ್ ಪಂದ್ಯಾವಳಿಯಾಗಿದ್ದು, ಒಬ್ಬರಿಗೆ 2 ಓವರ್, ಇನ್ನುಳಿದ ಮೂರು ಓವರ್‍ಗಳು ತಲಾ ಒಬ್ಬರಿಗೆ ಒಂದು , ಒಂದು ತಂಡಕ್ಕೆ 7 ಆಟಗಾರರಿಗೆ ಅವಕಾಶ, ತಂಡ ತಡವಾಗಿ ಪಂದ್ಯಾವಳಿಗೆ ತಡವಾಗಿ ಆಗಮಿಸಿದಲ್ಲಿ ವಾಕ್ ಓವರ್ ನೀಡಲಾಗುತ್ತದೆ. 20ಕ್ಕೂ ಹೆಚ್ಚು ತಂಡಗಳು ಭಾಗವಸುವ ನಿರೀಕ್ಷೆಗಳಿವೆ. ಹೆಚ್ಚಿನ ಮಾಹಿತಿಗಾಗಿ. 8095860195, 9880414702 ಸಂಪರ್ಕಿಸಬಹುದು.


ಸಚ್ಚಿನ್, ಮೋಹನ್, ಕಿರಣ್, ಅನಿಲ್, ಪ್ರವೀನ್, ಕಾರ್ತಿಕ್, ರವಿ ಮತ್ತಿತರರಿದ್ದರು.