
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.04 : ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ನಿನ್ನೆ ತಡರಾತ್ರಿ ಹಲವೆಡೆ ಕಾಮನ ಪ್ರತಿಕೃತಿ ಮಾಡಿ, ದಹನ ಮಾಡುವ ಕಾರ್ಯಕ್ರಮ ಮಕ್ಕಳು ದೊಡ್ಡವರೂ ಸೇತಿ ಸಂಭ್ರಮದಿಂದ ಮಾಡಿದ್ದಾರೆ.
ಸಂಪ್ರದಾಯ ಬದ್ಧವಾಗಿ ಕಾಮನಿಗೆ ಚಟ್ಟಕಟ್ಟಿ, ತಮಟೆ ಬಾರಿಸುತ್ರ. ಬಾಯಿ ಬಾಯಿ ಹೊಡಕೊಳ್ಳುತ್ತ. ನಾವು ಕಾಮಣ್ಣನ ಮಕ್ಕಳೆಂದು ಚಟ್ಟ ಹೊತ್ಕೊಂಡು ಮೇಳಮಾಡುತ್ತ ಸಾಗಿದರು. ನಂತರ ವೃತ್ತದಲ್ಲಿ ಕಟ್ಟಿಗೆಯ ರಾಶಿ ಮಾಡಿ ಬೆಂಕಿ ಹಚ್ಚಿ ಕಾಮನ ದಹನ ಮಾಡಲಾಯ್ತು.
ಕಾಮ ದಹನದ ನಂತರ ಇಂದು ಬೆಳಿಗ್ಗೆ ಬಣ್ಣಗಳ ಆಟ ಶುರುವಾಗಿ, ಮಕ್ಕಳು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಡಿಜೆ ಸೌಂಡ್ಗಳಿಗೆ ತಾಳ ಹಾಕಿದ ಯುವಕರು ನೃತ್ಯ ಮಾಡಿ ಹಬ್ಬದ ಉತ್ಸಾಹ ಹೆಚ್ಚಿಸಿದರು.ಕೆಲವೆಡೆ ವಿಶೇಷ ಪೂಜೆ ಸಲ್ಲಿಸಿ, ದುಷ್ಟಶಕ್ತಿಗಳ ನಾಶ ಹಾಗೂ ಸಂಕಲ್ಪಗಳ ಸಿದ್ದಿಗಾಗಿ ಪ್ರಾರ್ಥಿಸಿದರು.
ಪೊಲೀಸ್ ಇಲಾಖೆ ಭದ್ರತಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೇ ಹಬ್ಬ ಶಾಂತಿಯುತವಾಗಿ ನಡೆಯುತ್ತಿದೆ.

























