Home ಸುದ್ದಿ ರಾಷ್ಟ್ರೀಯ ದೆಹಲಿ ಕಾರ್ಮಿಕರ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ

ದೆಹಲಿ ಕಾರ್ಮಿಕರ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ

ನವದೆಹಲಿ,ಜೂ.24:- ದೆಹಲಿಯ ಉದ್ಯೋಗ ಭವನದ ಬಳಿ ಕಾರ್ಮಿಕರ ಶಿಬಿರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಮ ಸುಮಾರು 200ಕ್ಕೂ ಹೆಚ್ಚು ಟಿನ್ ಶೆಡ್ ಮನೆಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.


ಉದ್ಯೋಗ ಭವನದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ಟಾ ಪುನರ್‍ಅಭಿವೃದ್ಧಿ ಯೋಜನೆಯಡಿ ಧ್ವಂಸ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲೇ ಈ ಅಗ್ನಿ ಅವಘಡ ಸಂಭವಿಸಿದೆ.ಮುಂಜಾನೆ 3 ಗಂಟೆ ಸುಮಾರಿಗೆ ವಿದ್ಯುತ್ ಪ್ಯಾನೆಲ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಅದೇ ಬೆಂಕಿ ವೇಗವಾಗಿ ಹಬ್ಬಿ ಕಾರ್ಮಿಕರ ತಾತ್ಕಾಲಿಕ ವಸತಿ ಶೆಡ್‍ಗಳನ್ನು ಆವರಿಸಿತು. ಇನ್ನು ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ 20 ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಯಿತು ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.