Home ಜಿಲ್ಲೆ ಕೊಂಚಿಗೇರಿ: ಗ್ರಾವೆಲ್ ಸಾಗಾಣೆ ಅಕ್ರಮ ದಾರಿ ರೈತರ ಪ್ರತಿಭಟನೆ

ಕೊಂಚಿಗೇರಿ: ಗ್ರಾವೆಲ್ ಸಾಗಾಣೆ ಅಕ್ರಮ ದಾರಿ ರೈತರ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಸಿರುಗುಪ್ಪ, ಜು.11: ತಾಲೂಕಿನ ಕೊಂಚಿಗೇರಿ ಗ್ರಾಮದ ಬಳಿಯ ಹಾಗಲೂರು ಗ್ರಾಮ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ ಗ್ರಾವೆಲ್ ಸಾಗಾಣೆ ಮಾಡುತ್ತಿದ್ದಾರೆ ಅದಕ್ಕೆ ಪೂರಕವಂತೆ

ಅಕ್ರಮವಾಗಿ ದಾರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಗ್ರಾಪಂ ಸದಸ್ಯ ಕೋನಪ್ಪ ಎಚ್ ಮಾತನಾಡಿ, ಅಧಿಕಾರಿಗಳ ಸಹಕಾರದಿಂದ ಮರಂ (ಗ್ರಾವೆಲ್) ಸಾಗಾಣೆ ಮಾಡುತ್ತಿದ್ದು, ಅಕ್ರಮವಾಗಿ ದಾರಿ ಮಾಡಿಕೊಂಡಿದ್ದು ಈ ಕುರಿತು ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.  ಈ ಆರಣ್ಯ ಭೂಮಿಯಲ್ಲಿ ರಸ್ತೆ ಮಾಡಿಕೊಂಡು ರಾಜಾರೋಷವಾಗಿ ಟಿಪ್ಪರ್ ಗಳು ಓಡಾಡುತ್ತಿವೆ ಎಂದು ಆರೋಪಿಸಿದರು.

ಅರಣ್ಯ ಭೂಮಿಯಲ್ಲಿ ನೂರಾರು ಮರಗಳನ್ನು ಕಡಿದು ರಸ್ತೆ ಮಾಡಿದ್ದಾರೆ. ಗ್ರಾವೆಲ್ ತೆಗೆಯಲು ಪಡೆದುಕೊಂಡ ಅನುಮತಿಯೇ ಬೇರೆಯೇ ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ ಎಂದು ಗ್ರಾಮಸ್ಥ ದಾಸರ ರುದ್ರಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಶ್ನಿಸಿದರೆ ಡಿವೈಆರ್ ಎಫ್ ಬಸವನಗೌಡ ಇವರು ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರ ಚಿತ್ರೀಕರಣ ಮಾಡುತ್ತಾರೆ ಎಂದು ರೈತ ಮಹಿಳೆಯರಾದ ಉಮಾದೇವಿ, ಭಾಗ್ಯ ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಕುರುಬರ ರಮೇಶ, ಪಿ ರಾಜಕುಮಾರ, ಈಡಿಗರ ರುದ್ರಯ್ಯ, ಹರಿಜನ ನಾಗೇಶಪ್ಪ, ದಾಸರ ಬಸವರಾಜ, ಕುರುಬರ ಕೊಂಚಗೇರಪ್ಪ, ಈಡಿಗರ ವೀರೇಶ, ಎಚ್ ಹುಲೆಪ್ಪ ಮುಂತಾದವರು ಇದ್ದರು.

ಹೇಳಿಕೆ:- ಹಾಗಲೂರು ಗ್ರಾಮದಲ್ಲಿ ಗ್ರಾವೆಲ್ ಉಪ ಖನಿಜ ಸಾಗಾಣಿಕೆ ಮಾಡಲು ಇಲಾಖೆಯ ಅನುಮತಿ ಪಡೆದಿರುತ್ತಾರೆ. ನಿಯಮಾವಳಿ ಪಾಲಿಸದೆ ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನವೀನ್ ಹೇಳಿದ್ದಾರೆ.

ಹೇಳಿಕೆ:- ಅರಣ್ಯ ಪ್ರದೇಶದಲ್ಲಿ ದಾರಿ ಇದೆಯೇ ಎಂಬ ಬಗ್ಗೆ ಸ್ಥಳ ಪರಿಶೀಲನೆ ಹಾಗೂ ನಕಾಶೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ತಾಲೂಕು ವಲಯ ಅರಣ್ಯಾಧಿಕಾರಿ

ಕಾಂತರಾಜು ಹೇಳಿದ್ದಾರೆ.

ಹೇಳಿಕೆ:- ಹಾಗಲೂರು ಗ್ರಾಮದಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಹಾಗೂ ದಂಡ ಪಾವತಿಸಲು ಸೂಚಿಸಲಾಗುತ್ತದೆ ಎಂದು ತಹಶೀಲ್ದಾರ್ ಗೌಸೀಯ ಬೇಗಂ ತಿಳಿಸಿದ್ದಾರೆ.