
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ.ಜು.10:- ತಾಲೂಕಿನ ಕೊಂಗರಹಳ್ಳಿ ಗ್ರಾಮ ಪಂಚಾಯತ್ 2025/26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ಮತ್ತು 15 ನೇ ಹಣಕಾಸು ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಲೆಕ್ಕ ಪರಿಶೋಧನಾ ಗ್ರಾಮ ಸಭೆ ನಡೆಯಿತು.
ಸಭೆಯಲ್ಲಿ ತಾಲೂಕು ನರೇಗಾ ಸಂಯೋಜಕ ಸಿದ್ದಪ್ಪಾಜಿ ಮಾತನಾಡುತ್ತಾ ಕೊಂಗರಹಳ್ಳಿ ಗ್ರಾಮ ಪಂಚಾಯತಿ ಸೇರಿದಂತೆ ಕಾಮಗೆರೆ ಗ್ರಾಮದಲ್ಲಿ ನರೇಗಾ ಯೋಜನೆ ಅಡಿ ವಸತಿ ನಿರ್ಮಾಣ ಸಮುದಾಯ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿಯ 36 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಒಟ್ಟು 1,68,1200/- ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಸವಿವರವಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 15 ನೇ ಹಣಕಾಸು ಹಾಗೂ ರಾಜ್ಯ ಹಣಕಾಸು ಯೋಜನೆಯಡಿ ಗಣತಾಜ್ಯ ಇಲವಾರಿ ತುರ್ತುಮಲ್ಯ ಕೆಲಸಗಳಿಗೆ ಮೀಸಲು ಅನುದಾನ ಚರಂಡಿ ಊಳೆತ್ತುವುದು ವಿದ್ಯುತ್ ದೀಪ ಕುಡಿಯುವ ನೀರಿನ ನಿರ್ವಹಣೆ ನೌಕರರ ವೇತನದ ಖಾತೆಗೆ ಜಮಾ. ಸೇರಿದಂತೆ 4,62,1091 /- ರೂಗಳನ್ನ ಖರ್ಚು ಮಾಡಲಾಗಿದೆ.
ಜೊತೆಗೆ ರಾಜ್ಯ ಹಣಕಾಸು ಇಲ್ಲ ಪಂಚಾಯತ್ ಅನುದಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶೌಚಾಲಯ ದುರಸ್ತಿ ಸಭಾಭವನದ ದುರಸ್ತಿ ಪ್ರಾಥಮಿಕ ಶಾಲೆಗೆ ವಿಶೇಷ ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ 378591- ರೂಗಳನ್ನು ಖರ್ಚು ಮಾಡಲಾಗಿದೆ ಎಂದು ಸಭೆಯಲ್ಲಿ ಸವಿವರವಾಗಿ ಮಂಡಿಸಿದರು.
15 ನೇ ಹಣಕಾಸು ಅನುದಾನದಲ್ಲಿ ಕಸ ವಿಲೇವಾರಿ ವಾಹನದ ದುರಸ್ತಿಗೆ 18 ಸಾವಿರಗಳನ್ನ ಖರ್ಚು ಮಾಡಲಾಗಿದ್ದು. ಇದು ಪಂಚಾಯಿತಿ ವಸೂಲಾತಿ ಹಣದಲ್ಲಿ ಖರ್ಚು ಮಾಡಬೇಕಿದೆ. ಹಾಗಾಗಿ ಈ ಹಣವನ್ನು ವಸೂಲಾತಿಗೆ ಬರೆಯಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಂದ್ರ ಅವರು ಮಾತನಾಡುತ್ತಾ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತು ತಿಳಿಸಿಕೊಟ್ಟರು. ಹಾಗೂ ಸಾರ್ವಜನಿಕರು ದೂರು ನೀಡಿದಂತಹ ಕುಡಿಯುವ ನೀರಿನ ಸಮಸ್ಯೆ ಹಾಗೂ ಚರಂಡಿ ಊಳೆತ್ತುವುದು, ನಾಗಪ್ಪ ಬಡಾವಣೆಯಲ್ಲಿ ಚರಂಡಿ ನಿರ್ಮಾಣ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆ ನಾಗರಾಜು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಂದ್ರ, ಕಾರ್ಯದರ್ಶಿ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ದಾಸಪ್ಪ, ಮಧು, ತೋಟಗಾರಿಕೆ ಇಲಾಖೆ ಜೀವಿತಾ, ಸುಧನ್ವರಾಜು ಸೇರಿದಂತೆ ಸಾರ್ವಜನಿಕರು ಸಭೆಯಲ್ಲಿ ಹಾಜರಿದ್ದರು.

































