Home ಜಿಲ್ಲೆ ಮಂಗಳೂರು ಅಕ್ರಮ ಮರಳು ದಾಸ್ತಾನು ಆರೋಪ : ಪ್ರಕರಣ ದಾಖಲು

ಅಕ್ರಮ ಮರಳು ದಾಸ್ತಾನು ಆರೋಪ : ಪ್ರಕರಣ ದಾಖಲು

ಉಪ್ಪಿನಂಗಡಿ: ಕರಾಯ ಗ್ರಾಮದ ಹುಣಸೇಕಟ್ಟೆ ಎಂಬಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಮರಳನ್ನು ಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣ ದಾಖಲಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಅನನ್ಯ ಶ್ರೀವಾಸ್ತವ್ ಗಸ್ತು ನಿರತರಾಗಿದ್ದ ವೇಳೆ ಅಕ್ರಮ ಮರಳು ಶೇಖರಣೆಯಾಗಿರುವುದನ್ನು ಕಂಡು ಪರಿಶೀಲಿಸಲಾಗಿ , ಹುಸೇನ್ ಎಂಬವರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಮರಳು ದಾಸ್ತಾನಿರಿಸಿರುವುದು ಕಂಡು ಬಂದಿದೆ. ಸುಮಾರು ಎರಡು ಟನ್‌ನಷ್ಟು ಮರಳನ್ನು ಕುಪ್ಪೆಟ್ಟಿ ಹೊಳೆಯಿಂದ ಅಕ್ರಮವಾಗಿ ಸಂಗ್ರಹಿಸಿ ಇಲ್ಲಿ ಶೇಖರಿಸಿಡಲಾಗಿದೆ ಎನ್ನಲಾಗಿದೆ. ಅಕ್ರಮ ಮರಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.