Home ಜಿಲ್ಲೆ ಹಿಂದುಳಿದ ವರ್ಗದ ಸಮೀಕ್ಷಾ ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಹಿಂದುಳಿದ ವರ್ಗದ ಸಮೀಕ್ಷಾ ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

Oplus_19005442

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜು.08: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅಭಿವೃದ್ದಿ ಮರೆತು ಕೇವಲ ಗ್ಯಾರೆಂಟಿಯಲ್ಲಿ ನಡೆಯುತ್ತಿದೆ. ಉದ್ಯೋಗ ಭರ್ತಿ ಮಾಡುತ್ತಿಲ್ಲ. ವೇತನ ಸರಿಯಾಗಿ ನೀಡುತ್ತಿಲ್ಲ, ಸಚಿವರು ಪ್ರವಾಸ ಮಾಡುತ್ತಿಲ್ಲ ಈ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ಪ್ರಶ್ನಿಸಲಿದೆಂದು ವಿಧಾನ ಪರಿಷತ್ತಿನ ವಿರೋದ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದ್ದಾರೆ.

ಅವರಿಂದು ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸಿ. ಮೀಸಲಾತಿಯನ್ನು ಶೇ 56 ರಷ್ಟು ನೀಡಿ ಉದ್ಯೋಗ ಭರ್ತಿಮಾಡಲು ಹೊರಟಿದೆ ಸರ್ಕಾರ, ಆದರೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿದೆ. ಹೀಗಿರುವಾಗ ಹೇಗೆ ಭರ್ತಿ ಮಾಡುತ್ತಿದೆ. ಈ ಸರ್ಕಾರ ಯುವ ಜನತೆಯನ್ನು ಮೋಸ ಮಾಡಲು ಉದ್ಯೋಗ ಭರ್ತಿ ಹೇಳಿಕೆ ನೀಡುತ್ತಿದೆಂದರು.

ಹಿಂದುಳಿದವರ ಸಮೀಕ್ಷೆಯನ್ನು 160 ಕೋಟಿ ವೆಚ್ಚದಿಂದ ಕಾಂತರಾಜ್ ಸಮತಿ ವರದಿ ನೀಡಿತು. ಅದು ಮೂಲೆಗುಂಪಾಯ್ತು. ನಂತರ ಹಿಂದುಳಿದವರ ಸಾಮಾಜಿಕ ಶೈಕ್ಷಣಿಕ ಸರ್ವೇಕ್ಷಣ ಮಾಡಿದರು ಮಧುಸೂದನ ನಾಯ್ಕ ಅಧ್ಯಕ್ಷತೆಯ ಆಯೋಗ 635 ಕೋಟಿ ರೂ ವೆಚ್ಚದಲ್ಲಿ. ಅವರು ನೀಡಿರುವ ವರದಿಯನ್ನು ರಾಜಿನಾಮೆ ನೀಡುವ ಮುನ್ನಾ ದಿನ ಸಿದ್ದರಾಮಯ್ಯ ಸ್ವೀಕರಿಸಿದರು. ಆದರೆ ವರದಿ ಸೋರಿಕೆಯಾಯ್ತು. ಇದರ ವಿರುದ್ದ ನ್ಯಾಯಾಲಯದ ಮೊರೆ ಹೋಗಿದೆ. ಅಲ್ಲಿಯೂ ಸರ್ಕಾರ ಸರಿಯಾಗಿ ವಾದ ಮಂಡನೆ ಮಾಡುತ್ತಿಲ್ಲ. ಈ ಸರ್ಕಾರಕ್ಕೆ ಹಿಂದುಳಿದವರ ಅಭಿವೃದ್ಧಿ ಬೇಕಾಗಿಲ್ಲ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಮಾತನಾಡಿ, ಹಿಂದುಳಿದ ವರ್ಗದ ಶೈಕ್ಷಣಿಕ, ಸಾಮಾಜಿಕ ಸರ್ವೇ ಯಲ್ಲಿ 34 ಲಕ್ಷ ಜನ ಪಾಲ್ಗೊಂಡಿಲ್ಲ ಎಂದ ಮೇಲೆ ಹೇಗೆ ವೈಜ್ಞಾನಿಕ ಸರ್ವೆ ಅಗುತ್ತೆ ಜನರ 635 ಕೋಟಿ ರೂ ತೆರಿಗೆ ಹಣ ವೆಚ್ಚ ಮಾಡಿದ ವರದಿಯನ್ನು ಯಾಕೆ ಜಾರಿಗೆ ತರುತ್ತಿಲ್ಲ. ನೆರೆಯ ಆಂದ್ರ ಪ್ರದೇಶ, ಬಿಹಾರದಲ್ಲಿ ಜಾರಿಗೆ ತಂದಂತೆ ಈ ರಾಜ್ಯದಲ್ಲೂ ಏಕೆ ತರುತ್ತಿಲ್ಲ. ಕೂಡಲೇ ಜಾರಿ ಮಾಡಿ ಎಂದರು.

ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರು ನಮ್ಮಪಕ್ಷದೊಳಗಿನವರೇ ನಮ್ಮ ಬೆಳವಣಿಗೆ ಸಹಿಸುತ್ತಿಲ್ಲ ಎಂಬ ಹೇಳಿಕೆ ಅದನ್ನು ನಮ್ಮೊಳಗೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತವೇ ಎಂದರು.

ವಿಧಾನ ಪರಿಷತ್ ಸದಸ್ಯ ವೈ ಎಂ ಸತೀಶ್, ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಅಶ್ವಿನಿ ಶಂಕರ್ ಮಾತನಾಡಿದರು.. ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ಮುಖಂಡರಾದ ಕೆ.ಎ.ರಾಮಲಿಂಗಪ್ಪ, ತಿಪ್ಪಣ್ಣ ಮೊದಲಾದವರು ಇದ್ದರು.