Home ಜಿಲ್ಲೆ ಹಬೊಹಳ್ಳಿ :ಜು.10 ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

ಹಬೊಹಳ್ಳಿ :ಜು.10 ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ

Oplus_0

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ:ಜು.08 ಪಟ್ಟಣದಲ್ಲಿ ಜು.10ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕರಿಯರ್ ಅಕಾಡೆಮಿ ಸಂಚಾಲಕ   ಜಿ.ಎಂ.ನಾಗಭೂಷಣಯ್ಯ ತಿಳಿಸಿದ್ದಾರೆ.     ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯ್ಕ ಹಾಗೂ ಧಾರವಾಡದ ಚಾಣಕ್ಯ

 ಅಕಾಡೆಮಿ ಸಹಯೋಗದೊಂದಿಗೆ ನಿರ್ದೆಶಕ ಪ್ರದೀಪ್ ಗುಡ್ಡದ್ ಅವರ ಉಚಿತ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಪ್ರದೀಪ್ ಗುಡ್ಡದ್   ಬನ್ನಿಗೋಳದವರಾಗಿದ್ದು, ಈ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂದು ಉಚಿತವಾಗಿ ಹರ ಕಲ್ಯಾಣ ಮಂಟಪದಲ್ಲಿ 15 ದಿನ ನುರಿತ ಉಪನ್ಯಾಸಕರಿಂದ  ತರಬೇತಿ ನೀಡಲಾಗುವುದು.     ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನ ಅಭ್ಯರ್ಥಿಗಳು ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಸುಮಾರು ಎರಡು ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಲು ನೋಂದಣಿ ಮಾಡಿಸಿದ್ದು, ಶಾಸಕರು ಇನ್ನಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದಾರೆ. ಹೊರ ಜಿಲ್ಲೆಯಿಂದ ಆಗಮಿಸುವವರಿಗೆ ವಸತಿ ಮತ್ತು ಊಟ ಸೌಲಭ್ಯ ಕೂಡ ಕಲ್ಪಿಸಲಾಗುವುದು. ಒಂದು ದಿನಕ್ಕೆ ಒಬ್ಬ ಅಭ್ಯರ್ಥಿಗೆ ರೂ. 100 ಮಾತ್ರ ತೆಗೆದುಕೊಳ್ಳಲಾಗುವುದು. ಬೆಳಗ್ಗೆ 9:00 ರಿಂದ ಸಂಜೆ 6 ಗಂಟೆಯವರೆಗೆ ತರಬೇತಿ ಕ್ಲಾಸ್ ನಡೆಯುತ್ತವೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕೋರಿದ್ದಾರೆ. ಈ ಸಂದರ್ಭದಲ್ಲಿ ಉಪನ್ಯಾಸಕ ಅಂಜಿನಪ್ಪ ಗುಡದ್ ಇದ್ದರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7353693829,