Home Uncategorized ಹಕ್ಕುಪತ್ರಕ್ಕಾಗಿ ಸಿರುಗುಪ್ಪದಿಂದ ಬಳ್ಳಾರಿಗೆ ಪಾದಯಾತ್ರೆಯಲ್ಲಿ ಬಂದ ರೈತರು.

ಹಕ್ಕುಪತ್ರಕ್ಕಾಗಿ ಸಿರುಗುಪ್ಪದಿಂದ ಬಳ್ಳಾರಿಗೆ ಪಾದಯಾತ್ರೆಯಲ್ಲಿ ಬಂದ ರೈತರು.

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.29: ಬಿರು ಬಿಸಿಲನ್ನು ಲೆಕ್ಕಿಸದೆ ಡಾಂಬಾರ್ ರಸ್ತೆಯ ಮೇಲೆ ಹೆಜ್ಹೆ ಹಾಕುತ್ತ ರೈತರು ಕರ್ನಾಟಕ ಪ್ರಾಂತ ರೈತ ಸಂಘದ  ನೇತೃತ್ವದಲ್ಲಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಿಂದ ಬಳ್ಳಾರಿ ನಗರಕ್ಕೆ ತಾವು ಉಳುಮೆ ಮಾಡುವ ಜಮೀನಿಗೆ ಹಕ್ಕು ಪತ್ರ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲು ಪಾದಯಾತ್ರೆ ಮೂಲಕ ಬಂದಿದ್ದಾರೆ.

ನಿನ್ನೆ  ಸಿರುಗುಪ್ಪ ಪಟ್ಟಣದ  ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪಾದಯಾತ್ರೆಯನ್ನು ಆರಂಭಿಸಿ. 55 ಕಿಲೋ ಮೀಟರ್ ಪಾದಯಾತ್ರೆ ಮೂಲಕ ಬಳ್ಳಾರಿಗೆ ಬಂದರು.

ಸಿರುಗುಪ್ಪ ತಾಲೂಕಿನ ಹಳೇಕೋಟೆ 64 ರ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಬೇಕೆಂದು.  ಭೂ ಒಡೆತನ ಯೋಜನೆಯಡಿಯಲ್ಲಿ ಅಕ್ರಮ ನೊಂದಾವಣೆ ಆಗಿರುವುದನ್ನು ಸಮಗ್ರ ತನಿಖೆಗೊಳಪಡಿಸಲು,  ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡುತ್ತಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸಾಗುವಳಿ ನಿರತ ರೈತರಿಗೆ ಹಕ್ಕುಪತ್ರ ನಿಡಲು ಒತ್ತಾಯಿಸಿ.ಪಾದಯಾತ್ರೆಯಲ್ಲಿ 120 ಕ್ಕೂ ಹೆಚ್ಚು ಜನ ರೈತರು ಬಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.