Home ಜಿಲ್ಲೆ ಮಂಗಳೂರು ಸುಳ್ಯ ದಸರಾದಲ್ಲಿ ಸಾರ್ವಜನಿಕ ಶ್ರೀ ಚಂಡಿಕಾ ಮಹಾಯಾಗ

ಸುಳ್ಯ ದಸರಾದಲ್ಲಿ ಸಾರ್ವಜನಿಕ ಶ್ರೀ ಚಂಡಿಕಾ ಮಹಾಯಾಗ

ಸುಳ್ಯ:ಸುಳ್ಯದಲ್ಲಿ ನಡೆಯುತ್ತಿರುವ ೫೫ನೇ ವರ್ಷದ ಶಾರದಾಂಬ ಉತ್ಸವ ’ಸುಳ್ಯ ದಸರಾ’ ಅಂಗವಾಗಿ ಸಾರ್ವಜನಿಕ ಶ್ರೀ ಚಂಡಿಕಾ ಮಹಾಯಾಗ ನಡೆಯಿತು.
ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಹಕಾರದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ವೇದಮೂರ್ತಿ ನಾಗರಾಜ ಭಟ್ ನೇತೃತ್ವದಲ್ಲಿ ಶ್ರೀ ಶಾರದಾಂಬಾ ಕಲಾವೇದಿಕೆಯಲ್ಲಿ ಶ್ರೀ
ಚಂಡಿಕಾ ಮಹಾಯಾಗ ನಡೆಯಿತು. ಜೊತೆಗೆ ಮಹಿಳೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ನಡೆಯಿತು. ಚಂಡಿಕಾಯಾಗಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು.