
ಕಲಬುರಗಿ,ಅ.26-ತಾಲ್ಲೂಕಿನ ಹತಗುಂದಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಾರ್ವತಿ ಓಗೆ, ಶಾಲಾ ಮುಖ್ಯೋಪಾಧ್ಯಾಯ ಹಾಗೂ ಸರಕಾರಿ ನೌಕರರ ಸಂಘದ ಜಿಲ್ಲಾ ಹಿರಿಯ ಉಪಾಧ್ಯಕ್ಷರಾದ ದೇವಿಂದ್ರಪ್ಪ ಗಣಮುಖಿ, ಶಾಲಾ ಸಹ ಶಿಕ್ಷಕರಾದ ಮಹೇಶ್ ದೇಶಮುಖ, ಅಕ್ತರ್ ಶಿರೀನ್ ಬೇಗಂ, ಸುರೇಖಾ ಪಾಟೀಲ, ಶಾಲೆಯ ಮಕ್ಕಳು, ಗ್ರಾಮದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.























