Home ಜಿಲ್ಲೆ ಮಂಗಳೂರು ಸರ್ಕಾರಿ ಆಸ್ಪತ್ರೆ ಮೆಡಿಕಲ್ ಕಾಲೇಜು ಆಸ್ಪತ್ರೆ ಅಧೀನಕ್ಕೆ -ಆರೋಗ್ಯ ಸಚಿವರಿಗೆ ಪುತ್ತೂರು ಶಾಸಕರ ಮನವಿ

ಸರ್ಕಾರಿ ಆಸ್ಪತ್ರೆ ಮೆಡಿಕಲ್ ಕಾಲೇಜು ಆಸ್ಪತ್ರೆ ಅಧೀನಕ್ಕೆ -ಆರೋಗ್ಯ ಸಚಿವರಿಗೆ ಪುತ್ತೂರು ಶಾಸಕರ ಮನವಿ

ಪುತ್ತೂರು: ಮುಂದಿನ ವರ್ಷ ೨೦೨೭ರಲ್ಲಿ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ಪೂರಕವಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು ಪುತ್ತೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಅಧೀನಕ್ಕೆ ಒಳಪಡಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಮನವಿ ಮಾಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿನ ಕಟ್ಟಡ ನಿರ್ಮಾಣವಾಗುವ ಹಂತದಲ್ಲಿಯೇ ಮೆಡಿಕಲ್ ಕಾಲೇಜಿಗೆ ಪ್ರವೇಶಾತಿಯೂ ಆರಂಭಗೊಳ್ಳಲಿದೆ.
ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಯನ್ನು ಅಧೀನಕ್ಕೊಳಪಡಿಸುವ ಜತೆಗೆ ಸ್ಕ್ಯಾನಿಂಗ್, ಬ್ಲಡ್ ಬ್ಯಾಂಕ್, ಎಕ್ಸ್‌ರೇ ಕೇಂದ್ರ, ಮೆಡಿಕಲ್ ಲ್ಯಾಬ್ ಪ್ರಾರಂಭ ಮಾಡುವ ಕುರಿತೂ ಅವರು ಆರೋಗ್ಯ ಸಚಿವರಲ್ಲಿ ಚರ್ಚೆ ನಡೆಸಿದರು.
ಈ ಮನವಿಗೆ ಸ್ಪಂಧಿಸಿರುವ ಸಚಿವರು ತಕ್ಷಣದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
— ಕೋಟ್—
ಪುತ್ತೂರು ಮೆಡಿಕಲ್ ಕಾಲೇಜು ಆರಂಭಕ್ಕೆ ಸಂಬಂಧಿಸಿ ಸರ್ಕಾರಿ ಆಸ್ಪತ್ರೆಯನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಯ ಅಧೀನಕ್ಕೆ ತರುವಂತೆ ಮನವಿ ಮಾಡಿದ್ದೇನೆ. ಮೆಡಿಕಲ್ ಕಾಲೇಜು ಆರಂಭಕ್ಕೆ ಇದು ತುಂಬಾ ಅಗತ್ಯವಾಗಿದೆ. ಪುತ್ತೂರು ಜನತೆಯ ಬಹುವರ್ಷದ ಮೆಡಿಕಲ್ ಕಾಲೇಜು ಕನಸು ಮುಂದಿನ ವರ್ಷವೇ ನನಸಾಗಲಿದೆ- ಅಶೋಕ್ ರೈ