
ಮುಂಬೈ, ಜು. 9- ಖ್ಯಾತ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ಮುಖ್ಯ ಭೂಮಿಕೆಯಲ್ಲಿರುವ, ಮಾನವ ಹಕ್ಕುಗಳ ಹೋರಾಟದ ಕಥಾಹಂದರ ಹೊಂದಿರುವಸಟ್ಲೆಜ್’ ಚಿತ್ರದ ಸುತ್ತಲಿನ ವಿವಾದ ದಿನದಿಂದ ದಿನಕ್ಕೆ ಉಲ್ಬಣ ಕೊಳ್ಳುತ್ತಿದೆ.ಒಟಿಟಿ ಪ್ಲಾಟ್ಫಾರ್ಮ್ಗಳಿಂದ ಚಿತ್ರವನ್ನು ದಿಢೀರ್ ಎಂದು ತೆಗೆದುಹಾಕಿದ ನಂತರ ಈ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ. ಸದ್ಯ ಈ ಚಿತ್ರದ ಪರವಾಗಿ ಬಾಲಿವುಡ್ನ ಪ್ರಸಿದ್ಧ ನಿರ್ದೇಶಕ ಅನುರಾಗ್ ಕಶ್ಯಪ್ ಧ್ವನಿ ಎತ್ತಿದ್ದಾರೆ.
ನಿಷೇಧದ ವಿರುದ್ಧ ಕಶ್ಯಪ್ ಆಕ್ರೋಶ
ಯಾವುದೇ ಒಂದು ಕಲಾಕೃತಿಯನ್ನು ನಿಷೇಧಿಸುವುದರಿಂದ ಅದನ್ನು ನೋಡಬೇಕೆಂಬ ಜನರ ಕುತೂಹಲ ಮತ್ತಷ್ಟು ಹೆಚ್ಚುತ್ತದೆ ಎಂದು ಅನುರಾಗ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಜೀ5 ಸಂಸ್ಥೆಯ ಪೆÇೀಸ್ಟ್ ಒಂದನ್ನು ಹಂಚಿಕೊಂಡಿರುವ ಅವರು, ಭಾರತದಲ್ಲಿ `ಸಟ್ಲೆಜ್’ ಚಿತ್ರದ ಸ್ಟ್ರೀಮಿಂಗ್ ಸದ್ಯಕ್ಕೆ ಸ್ಥಗಿತಗೊಳಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
“ನಾನು ಈ ಮೊದಲು ಈ ಸಿನಿಮಾವನ್ನು ನೋಡುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ಈಗ ಇದನ್ನು ಏಕೆ ಒಟಿಟಿಯಿಂದ ತೆಗೆದುಹಾಕಲಾಗಿದೆ ಎಂಬ ರಹಸ್ಯವನ್ನು ತಿಳಿಯಲು ನಾನು ಖಂಡಿತವಾಗಿಯೂ ಈ ಚಿತ್ರವನ್ನು ನೋಡುತ್ತೇನೆ” ಎಂದು ಕಶ್ಯಪ್ ಬರೆದುಕೊಂಡಿದ್ದಾರೆ.
ಪೈರೇಟೆಡ್ ಆವೃತ್ತಿಯನ್ನಾದರೂ ನೋಡಿ ಎಂದ ನಿರ್ದೇಶಕ!
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಚಿತ್ರದ ಎಡಿಟೆಡ್ ವಿಡಿಯೋ ಒಂದನ್ನು ಹಂಚಿಕೊಂಡಿರುವ ಕಶ್ಯಪ್, ಚಿತ್ರದಲ್ಲಿದ್ದ ನಟ ಅರ್ಜುನ್ ರಾಂಪಾಲ್ ಅವರ ಒಂದು ನಿರ್ದಿಷ್ಟ ದೃಶ್ಯವೇ ಸಿನಿಮಾ ಬ್ಯಾನ್ ಆಗಲು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ ಎಂದಿದ್ದಾರೆ. ಜೊತೆಗೆ, ಸಿನಿಮಾ ಸದ್ಯಕ್ಕೆ ಯಾವುದೇ ಅಧಿಕೃತ ಪ್ಲಾಟ್ಫಾರ್ಮ್ನಲ್ಲಿ ಸಿಗದೇ ಇದ್ದರೂ, “ಜನರು ಪೈರೇಟೆಡ್ ಆವೃತ್ತಿಯನ್ನಾದರೂ ಹುಡುಕಿ ಈ ಚಿತ್ರವನ್ನು ನೋಡಬೇಕು” ಎಂದು ಕರೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಐಎಂಡಿಬಿ ರೇಟಿಂಗ್ನಲ್ಲೂ ಗೊಂದಲ
ವಿವಾದಗಳ ನಡುವೆಯೂ `ಸಟ್ಲೆಜ್’ ಚಿತ್ರವು ಐಎಂ ಡಿಬಿI ಯಲ್ಲಿ 9.5 ರೇಟಿಂಗ್ ಪಡೆಯುವ ಮೂಲಕ 2026ರ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ, ದುರಾದೃಷ್ಟವಶಾತ್ ಈಗ ಐಎಂ ಡಿಬಿ ವೆಬ್ಸೈಟ್ನಿಂದಲೂ ಈ ಚಿತ್ರದ ರೇಟಿಂಗ್ ಪುಟವನ್ನು ತೆಗೆದುಹಾಕಲಾಗಿದೆ.





























