Home ಜಿಲ್ಲೆ ರಾಜ ಕಾಲುವೆ  ಸೇತುವೆ ಕಾಮಗಾರಿ ಸ್ಥಗಿತ ಪ್ರಶ್ನಿಸಿದ ಇವ್ರಾಹಿಂ ಬಾಬು

ರಾಜ ಕಾಲುವೆ  ಸೇತುವೆ ಕಾಮಗಾರಿ ಸ್ಥಗಿತ ಪ್ರಶ್ನಿಸಿದ ಇವ್ರಾಹಿಂ ಬಾಬು

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.05: ನಗರದ ಬೋಯಗೇರಿ ವೃತ್ತದ ರಾಜಕಾಲುವೆ ಸೇತುವೆ ಕಾಮಗಾರಿ ಏಕೆ ಸ್ಥಗಿತಗೊಂಡಿದೆ ಉತ್ತರ ನೀಡಿ ಎಂದು ಪಾಲಿಕೆ ಆಯುಕ್ತರಿಗೆ ಸದಸ್ಯ ಸಿ.ಇಬ್ರಾಹಿಂ ಬಾಬು ಕೇಳಿದ್ದಾರೆ.

ಈ  ರಾಜಕಾಲುವೆ ಸೇತುವೆಯು ನಗರದ 9,10,11,12 ವಾರ್ಡಗಳಿಗೆ ನೇರ ಸಂರ್ಪಕ ಕಲ್ಪಿಸುವ ಅತಿ ಮುಖ್ಯ ಸೇತುವೆಯಾಗಿದೆ. ಇದು ಶತಮಾನಗಳ ಹಳೇಯದಾಗಿದ್ದು ಇಂದಿನ ವರೆಗೂ ಬಳಕೆಯಲ್ಲಿದ್ದು ಸಾರ್ವಜನಿಕರಿಗೆ, ಬಸ್ಗಳ, ಲಾರಿಗಳಂತಹ ಭಾರಿ ವಾಹನಗಳ ಸಂಚಾರಕ್ಕೆ ನೆರವಾಗಿತ್ತು.

ಆದರೆ, ಪ್ರಸ್ತುತಃ  ಈಗ. ಹೊಸದಾಗಿ ಸೇತುವೆ ಪೂರ್ಣಗೊಳಿಸಲು ಮಾಡಲು ಮಹಾನಗರ ಪಾಲಿಕೆ ಮುಂದಾಗಿದ್ದು ಸಂತೋಷವಾದರೂ, ಸದರಿ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿದೆ ಆರು ತಿಂಗಳು ಕಳೆದರೂ ಮುಗಿದಿಲ್ಲ  ಮತ್ತು ಸ್ಥಗಿತಗೊಂಡಿರುವುದು  ಶೋಚನೀಯ ಸಂಗತಿಯಾಗಿದೆ.

ಆದ್ದರಿಂದ ಈ ಕಾಮಗಾರಿಯು ಯಾವ ಕಾರಣಕ್ಕೆ ಸ್ಥಗಿತಗೊಂಡಿದೆ ಎಂಬ ವಿಷಯವನ್ನು ಮಹಾನಗರ ಪಾಲಿಕೆಯ ಸದಸ್ಯನಾದ ನಾನು ಜನರಿಗೆ ಸಮಜಾಯಿಷಿ ನೀಡಬೇಕಾದ ಜವಾಬ್ದಾರಿ ಇದೆ.  ಮುಂದಿನ 3 ದಿನಗಳಲ್ಲಿ ಸೂಕ್ತ ಉತ್ತರವನ್ನು ನೀಡಬೇಕೆಂದು ಒತ್ತಾಯಿಸಿ. ಉತ್ತರ ನೀಡದಿದ್ದರೆ. ಜನರ ಪರವಾಗಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದಿದ್ದಾರೆ.