Home ಜಿಲ್ಲೆ ಮಂಗಳೂರು ಮೇ.೭; ಬಂಟ ಸಮಾಜದ ‘ಗುರುಪೀಠಾಧಿಪತಿ’ ಗುರುವಂದನೆ ಪಾದಪೂಜೆ

ಮೇ.೭; ಬಂಟ ಸಮಾಜದ ‘ಗುರುಪೀಠಾಧಿಪತಿ’ ಗುರುವಂದನೆ ಪಾದಪೂಜೆ

oplus_2

ಪುತ್ತೂರು: ಬಂಟ ಸಮಾಜಕ್ಕೆ ಗುರುಪೀಠ ಶೃಂಗೇರಿ. ಈ ಗುರುಪೀಠದ ಮೇಲೆ ಬಂಟ ಸಮಾಜಕ್ಕೆ ಅತ್ಯಂತ ಹೆಚ್ಚಿನ ಗೌರವವಿದೆ. ಶೃಂಗೇರಿ ಶಾರದಾ ಪೀಠಾಧೀಶ್ವರಾದ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಪುತ್ತೂರಿಗೆ ಬರಲಿದ್ದಾರೆ. ಮೇ.೭ರಂದು ಸಂಘದ ವತಿಯಿಂದ ನಡೆಯುವ ಗುರುವಂದನೆ ಮತ್ತು ಪಾದಪೂಜೆಯ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳುವಂತೆ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಮತ್ತು ಗುರುವಂದನಾ ಸಮಿತಿ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮೇ.೬ಕ್ಕೆ ಪುತ್ತೂರಿಗೆ ಸ್ವಾಮೀಜಿ ಆಗಮಿಸಲಿದ್ದಾರೆ. ಅವರಿಗೆ ಭವ್ಯ ಸ್ವಾಗತ ನೀಡಲಾಗುವುದು. ಮೇ.೭ರಂದು ಬಪ್ಪಳಿಗೆಯ ಶಂಕರ ಸಭಾಭವನದ ಲಲಿತಾಂಬಿಕಾ ವೇದಿಕೆಯಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಇದರ ಸದುಪಯೋಗವನ್ನು ಬಂಟ ಸಮಾಜದವರು ಪಡೆಯಬೇಕು. ಬಂಟ ಸಮಾಜದ ಅನೇಕ ತರವಾಡು ಅಥವಾ ಕುಟುಂಬದಲ್ಲಿ ಪ್ರಶ್ನಾ ಚಿಂತನೆ ವೇಳೆ ಮುಖ್ಯವಾಗಿ ಗುರು ಕೋಪ ಅಥವಾ ಗುರುಗಳ ಅಶೀರ್ವಾದ ಪಡೆಯುವ ವಿಚಾರ ಬರುತ್ತದೆ. ಈ ಸಂದರ್ಭ ಶೃಂಗೇರಿ ಕ್ಷೇತ್ರಕ್ಕೆ ಹೋಗಿ ಗುರುಗಳ ಆಶೀರ್ವಾದ ಪಡೆಯಬೇಕಾಗುತ್ತದೆ. ಪುತ್ತೂರಿಗೆ ಗುರುಗಳು ಆಗಮಿಸುವ ವೇಳೆ ಪುತ್ತೂರು ಬಂಟ ಸಂಘದಿಂದ ಗುರುವಂದನೆ ಮತ್ತು ಪಾದಪೂಜೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಂಟ ಸಮಾಜದ ಮಂದಿ ಭಾಗವಹಿಸಬೇಕು ಎಂದು ಅವರು ವಿನಂತಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಧರ್ಮಾಭ್ಯುದಯ ತಾಲೂಕು ಸಮಿತಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ನಿರ್ದೇಶಕರಾದ ರವಿಪ್ರಸಾದ್ ಶೆಟ್ಟಿ ಮತ್ತು ಗಂಗಾಧರ ರೈ ಎಲಿಕ ಉಪಸ್ಥಿತರಿದ್ದರು.