Home ಜಿಲ್ಲೆ ಉಭಯ ದೇವಿಗೆ ಹರಕೆ ತೀರಿಸಿದ ಭಕ್ತ ಗಣ

ಉಭಯ ದೇವಿಗೆ ಹರಕೆ ತೀರಿಸಿದ ಭಕ್ತ ಗಣ


ಬಾದಾಮಿ,ಏ.೨೯: ಮಳೆ ಬೆಳೆಯ ಮೂಲಕ ಲೋಕ ಕಲ್ಯಾಣಾರ್ಥವಾಗಿ ಕಳೆದ ಐದು ವಾರಗಳಿಂದ ಮಂಗಳವಾರ ದಿನವನ್ನು ನಗರದ ಗ್ರಾಮ ದೇವೆತೆಯ ವಾರವನ್ನಾಗಿ ಆಚರಿಸಿ ಕೊನೆ ಮಂಗಳವಾರ ಪುರವಾಸಿಗಳು ದೇವತೆಗೆ ಊಡಿ ತುಂಬಿ ಪ್ರಾರ್ಥಿಸುವ ಮೂಲಕ ವಾರವನ್ನು ಸಪಂನ್ನಗೊಳಿಸಿದರು.


ಬೆಳಿಗ್ಗೆಯಿAದಲೇ ಹಳೆ ಬಾದಾಮಿಯಲ್ಲಿರುವ ಉಭಯ ದೇವಿಯರಾದ ದ್ಯಾಮವ್ವ, ದುರ್ಗವ್ವ ಎಂಬ ಗ್ರಾಮ ದೇವೆತೆಯ ದೇವಸ್ಥಾನಕ್ಕೆ ಭಕ್ತರು ತಮ್ಮ ಕೂಡು ಕುಟುಂಬದೊAದಿಗೆ ಬಂದು ಶ್ರೀದೇವಿಯರಿಗೆ ಹಣ್ಣು, ಹಂಪಲ, ವಿವಿಧ ರೀತಿಯ ಆಹಾರ ಧಾನ್ಯಗಳ, ಖಾದ್ಯಗಳ ನೈವೇದ್ಯ ನೀಡುವ ಮೂಲಕ ಹರಕೆಯನ್ನು ತೀರಿಸಿದರು.