
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,2- ನಗರದ ಬಸವ ಭವನದಲ್ಲಿ ಮೇ.10 ರಂದು ಸಂಜೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಭಕ್ತಿ ಮತ್ತು ಸಡಗರ ಸಂಭ್ರಮದಿಂದ ಆಚರಿಸಲು ವೀರಶೈವ ಲಿಂಗಾಯತ ರಡ್ಡಿ ಸಮಾಜ ಸಿದ್ದತೆ ನಡೆಸಿದೆ.
ನಿನ್ನೆ ಸಂಜೆ ಬಸವ ಭವನದಲ್ಲಿ ಸಮಾಜದ ಮುಖಂಡರಾದ ಡಾ.ಎಸ್.ಜೆ.ವಿ.ಮಹಿಪಾಲ್, ಉಡೇದ ಬಸವರಾಜ್, ಹಿಂಮತರಾಜ್, ಡಾ.ಭಾಗ್ಯಲಕ್ಷ್ಮಿ, ಜಾನೆಕುಂಟೆ ನೇಪಾಕ್ಷಪ್ಪ, ಬಣಾಪುರ ನಾಗರಾಜ್, ಮಿಂಚೇರಿ ನರೇಂದ್ರಬಾಬು, ಕೋಳೂರು ವೆಂಕಟೇಶ್ ಗೌಡ, ಸಂಗನಕಲ್ಲು ಕಟ್ಟೆಗೌಡ, ತಿಮ್ಮನಗೌಡ, ಗೋನಾಳ್ ಮುರಹರಗೌಡ, ಶಂಕ್ರಪ್ಪ, ಯುದಿಷ್ಟರ, ಉಪ್ಪಾರ ಹೊಸಳ್ಳಿ ಶರಣ, ಸುಮಾರೆಡ್ಡಿ, ಜೋಳದರಾಶಿ ಬಸವರಾಜ್, ಹಲಕುಂದಿ ವೀರನಗೌಡ, ಸಿಂದವಾಳ ಜಡೇಶ್, ಸಿಮೆಂಟ್ ಸ್ವಾಮಿ, ಎನ್.ವೀರಭದ್ರಗೌಡ ಮೊದಲಾದವರು ಸಭೆ ನಡಿಸಿ.
ಮೇ.10 ರಂದು ಸಂಜೆ 4.45 ಕ್ಕೆ ಜಿಲ್ಲಾಡಳಿತದ ಸಹಕಾರದಿಂದ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರದ ಮೆರವಣಿಗೆ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ದುರ್ಗಮ್ಮ ದೇವಸ್ಥಾನದಿಂದ ಪಾರ್ವತಿ ನಗರದ ಮುಖ್ಯ ರಸ್ತೆಯ ಮೂಲಕ ಬಸವ ಭವನದ ವರೆಗೆ ನಡೆಯಲಿದೆ.
ನಂತರ ವೇದಿಕೆ ಕಾರ್ಯಕ್ರಮ ಜರುಗಲಿದೆ. ಇಲ್ಲಿ ಮಕ್ಕಳಿಂದ ನೃತ್ಯ, ಹಾಡುಗಾರಿಕೆ, ಉಪನ್ಯಾಸ, ಗಣ್ಯರಿಗೆ, ಸಮಾಜ ಸೇವೆ ಮಾಡಿದವರಿಗೆ ಗೌರವ ಸನ್ಮಾನ ನಡೆಸಲು ನಿರ್ಧರಿಸಿತು. ಜೊತೆಗೆ ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ಮಾಡಲು ಸಹ ತೀರ್ಮಾನಿಸಿತು






















