Home ಜಿಲ್ಲೆ ರಾಯಾಪುರದಲ್ಲಿ ರತಿ ಕಲ್ಯಾಣ ಬಯಲಾಟ ಪ್ರದರ್ಶನ

ರಾಯಾಪುರದಲ್ಲಿ ರತಿ ಕಲ್ಯಾಣ ಬಯಲಾಟ ಪ್ರದರ್ಶನ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಮೇ,2- ತಾಲೂಕಿನ ಎಂ.ಗೋನಾಳು ಗ್ರಾಮದ ಶ್ರೀ ವೀರಭದ್ರೆಶ್ವರ ಬಯಲಾಟ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ನಿನ್ನೆ ರಾತ್ರಿ ತಾಲೂಕಿನ ರಾಯಾಪುರ ಗ್ರಾಮದಲ್ಲಿ ಬಯಲಾಟ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮ ಜರುಗಿತು.

ಕಾಂಗ್ರೆಸ್ ಮುಖಂಡ ಬಿ ವೆಂಕಟೇಶ ಪ್ರಸಾದ ಮತ್ತು ಊರಿನ ಮುಖಂಡರು ಸೇರಿ ಉದ್ಘಾಟನೆ ಮಾಡಿದರು. ಹಳ್ಳಿಗಳಲ್ಲಿ ಸಂಗೀತ ಮತ್ತು ಬಯಲಾಟ ಕಾರ್ಯಕ್ರಮಗಳು ಮಾಡುವುದರಿಂದ ಹಳ್ಳಿಗಳಲ್ಲಿ ಹಬ್ಬದ ವಾತವರಣ ಉಂಟಾಗುತ್ತದೆ. ಅದಕಾರಣ ಹಳ್ಳಿಗಳಲ್ಲಿ ಹೆಚ್ಚಿನ ಸಾಂಸ್ಕ್ರತಿಕ ಕಾರ್ಯಕ್ರಗಳು ಹಮ್ಮಿಕೊಳ್ಳಬೇಕು ಎಂದರು.

ರಾಯಪುರ ಗ್ರಾಮದ ಮುಖಂಡರಗಳಾದ ಗೋವರ್ಧನ ರೆಡ್ಡಿ, ವೀರಭದ್ರಯ್ಯ ಸ್ವಾಮಿ, ಗುಳ್ಳಾಪುರ ವೆಂಕಟೇಶ್, ತಲಾರಿ ಮರ್ರಿಸ್ವಾಮಿ, ಗುಳ್ಳಾಪುರ ನಾಗರಾಜ, ಆರ್ ರಾಮಚಂದ್ರ ರೆಡ್ಡಿ, ಆರ್ ರವಿಕುಮಾರ್, ತಲಾರಿ ರಾಮಾಂಜನಿ, ಶಂಕರ ರೆಡ್ಡಿ ಹೊಸ ಮನೆ ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಶ್ರೀಹೆಚ್ ತಿಪ್ಪೆಸ್ವಾಮಿ ಉಪಸ್ಥಿದ್ದರು. ಸ್ವಾಗತ ಸಂಘದ ಅಧ್ಯಕ್ಷ ಜಿ. ನಾಗನಗೌಡ ನೇರವೇರಿಸಿದರು. ತದನಂತರ ಕೆ. ದೊಡ್ಡ ಬಸವ ಗವಾಯಿಗಳು ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು. ಬಿ.ಜಗದೀಶ ಸ್ವಾಮಿ ಇವರ ತಂಡದಿಂದ ರತಿ ಕಲ್ಯಾಣ ಬಯಲಾಟ ಪ್ರದರ್ಶನ ನಡೆಯಿತು.