Home ಜಿಲ್ಲೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬುದ್ಧಪೂರ್ಣಿಮೆ ಆಚರಣೆ

ಕೇಂದ್ರ ಕಾರಾಗೃಹದಲ್ಲಿ ಬುದ್ಧಪೂರ್ಣಿಮೆ ಆಚರಣೆ

ಕಲಬುರಗಿ,ಮೇ.2-ಕೇಂದ್ರ ಕಾರಾಗೃಹ ಒಳ ಆವರಣದಲ್ಲಿ ಶುಕ್ರವಾರ ಭಗವಾನ್ ಬುದ್ಧನ ಜಯಂತಿಯನ್ನು ಆಚರಿಸಲಾಯಿತು.
ಸಂಸ್ಥೆಯ ಪ್ರಭಾರಿ ಮುಖ್ಯ ಅಧೀಕ್ಷಕರಾದ ರಾಕೇಶ್ ಕಾಂಬಳೆ ರವರು ಬುದ್ಧನ ಪ್ರತಿಮೆಗೆ ಪೂಜೆ ಹಾಗೂ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡುತ್ತಾ ಮೊದಲಿಗೆ ಎಲ್ಲರಿಗೂ ಬುದ್ಧ ಪೂರ್ಣಿಮೆ ಶುಭಾಶಯಗಳು ತಿಳಿಸಿ ಭಾರತವು ಜಗತ್ತಿಗೆ ನೀಡಿದ ಅನೇಕ ಶ್ರೇಷ್ಠ ಕೊಡುಗೆಗಳಲ್ಲಿ ಬೌದ್ಧ ಧರ್ಮವು ಪ್ರಮುಖವಾದದ್ದು ಬುದ್ಧನ ಜೀವನ ಸಂದೇಶಗಳು ಇಂದಿನ ಪ್ರಸ್ತುತವಾಗಿದೆ ಶಾಂತಿಯು ನಮ್ಮೊಳಗಿನಿಂದಲೇ ಶುರುವಾಗುತ್ತದೆ ಎಂದು ಅವರು
ಕಲಿಸಿಕೊಟ್ಟರು ಅಲ್ಲದೆ ನಮ್ಮನ್ನು ನಾವು ಗೆಲ್ಲುವುದೇ ಜಗತ್ತಿನ ಶ್ರೇಷ್ಠ ವಿಜಯ ಎಂದು ತೋರಿಸಿಕೊಟ್ಟರು. ಬೌದ್ಧ ವಿಹಾರಗಳ ನಾಲ್ಕು ಉದಾತ ಸತ್ಯಗಳನ್ನು ಪ್ರಸಾರ ಮಾಡಿದರು. ಆಸೆಯೇ ದುಃಖಕ್ಕೆ ಮೂಲ ಕಾರಣ ಆಸೆಯನ್ನು ಗೆದ್ದರೆ ಮಾತ್ರ ದುಃಖದಿಂದ ಮುಕ್ತಿ ಸಾಧ್ಯ ಮತ್ತು ಅಷ್ಟಾಂಗ ಮಾರ್ಗವನ್ನು ಅನುಸರಿಸುವ ಮೂಲಕ ನಾವೆಲ್ಲರೂ ನೆಮ್ಮದಿ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕರಾದ ಚನ್ನಪ್ಪ ಯಟಗಲ್ ಜೈಲರಗಳಾದ ಸಾಗರ್ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಪುಂಡಲಿಕಟಿಕೆ ಸಹಾಯಕ ಜೈಲರಾದ ರಾಮು ರಾಠೋಡ್, ಮುಖ್ಯ ವಿಕ್ಷಕರಾದ ಶ್ರೀಕಾಂತ್ ರಂಜೇರಿ ಹಾಗೂ ಸಿಬ್ಬಂದಿ ವರ್ಗದ ಭಾಗವಹಿಸಿದರು.