Home ಜಿಲ್ಲೆ ಕಲಬುರಗಿ ಭಿಕ್ಷೆ ಬೇಡಿ ಎಸೆಸೆಲ್ಸಿಯಲ್ಲಿ 529 ಅಂಕ ಪಡೆದ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

ಭಿಕ್ಷೆ ಬೇಡಿ ಎಸೆಸೆಲ್ಸಿಯಲ್ಲಿ 529 ಅಂಕ ಪಡೆದ ವಿದ್ಯಾರ್ಥಿನಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

ಕಲಬುರಗಿ,ಮೇ.2-ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಾ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ಸುಜಾತಾ ಭೀಮಶಾ ಗೊಲ್ಲರ್ ಅವರನ್ನು ಜಿಲ್ಲಾಧಿಕಾರಿ ಫೌಝಿಯಾ ತರನ್ನ
ತರನ್ನುಮ್ ಅವರು ಸನ್ಮಾನಿಸಿ ಪೆÇ್ರೀತ್ಸಾಹಿಸಿದರು.
ಆಳಂದ ತಾಲೂಕಿನ ಮಾದನ ಹಿಪ್ಪರಗಾ ಸರ್ಕಾರಿ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸುಜಾತಾ, ಒಟ್ಟು 625 ಅಂಕಗಳಲ್ಲಿ 529 ಅಂಕಗಳನ್ನು ಪಡೆದು ಶೇ.84.64 ಫಲಿತಾಂಶ ಪಡೆದಿದ್ದಾರೆ.
ಸಂಕಷ್ಟಕರ ಪರಿಸ್ಥಿತಿಯಲ್ಲಿಯೇ ಅವರು ಸಾಧಿಸಿದ ಈ ಯಶಸ್ಸು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿದ್ಯಾರ್ಥಿನಿಯ ಈ ಸಾಧನೆಯನ್ನು ಗಮನಿಸಿದ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು, ಸುಜಾತಾ ಅವರನ್ನು ತಮ್ಮ ಕಚೇರಿಗೆ ಕರೆಯಿಸಿಕೊಂಡು ಸಿಹಿ ತಿನಿಸಿ ಸನ್ಮಾನಿಸಿದರು.