Home ಜಿಲ್ಲೆ ಕಲಬುರಗಿ ವಿಶ್ವ ಕಾರ್ಮಿಕರ ದಿನ ಯಶಸ್ವಿಗೊಳಿಸಲು ನಾಗಲಕ್ಷ್ಮೀ ಕರೆ

ವಿಶ್ವ ಕಾರ್ಮಿಕರ ದಿನ ಯಶಸ್ವಿಗೊಳಿಸಲು ನಾಗಲಕ್ಷ್ಮೀ ಕರೆ

ಕಲಬುರಗಿ,ಮೇ.2-1886, ಮೇ.1 ರಂದು ಅಮೇರಿಕದ ಚಿಕಾಗೋ ನಗರದಲ್ಲಿ 8 ಗಂಟೆಗಳ ದುಡಿಮೆಯ ದಿನಕ್ಕಾಗಿ ನಡೆದ ಚಾರಿತ್ರಿಕ ಹೋರಾಟದಲ್ಲಿ ಜೀವ ತೆತ್ತ ಹುತಾತ್ಮರಿಗೆ ಗೌರವ ಸಲ್ಲಿಸುತ್ತ, 140ನೇ ಮೇ ದಿನದ ಐತಿಹಾಸಿಕ ಸಂದರ್ಭದಲ್ಲಿ ನಾವು ಅಂತರರಾಷ್ಟ್ರೀಯ ಕಾರ್ಮಿಕ ವರ್ಗದ ಹೋರಾಟಗಳನ್ನು ಮತ್ತೆ ನೆನೆಯಬೇಕಿದೆ. ದುಡಿಯುವ ಜನರ ಹೋರಾಟದ ಮುಂದಿನ ದಿಕ್ಕನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕಿದೆ ಎಂದು ಎ.ಐ.ಯು.ಟಿ.ಯು.ಸಿ ನ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಡಿ. ನಾಗಲಕ್ಷ್ಮೀ ರವರು ನುಡಿದರು.
ಅವರು ಜೆ.ಸಿ.ಟಿ.ಯು. ನ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಇಂದು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಮೇ ದಿನಾಚರಣೆ ಪ್ರಯುಕ್ತ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಮುಂದುವರೆದು, ಒಂದು ಶತಮಾನದ ಹಿಂದೆ ಅಮೇರಿಕಾ ಹಾಗೂ ಯುರೋಪ್ ದೇಶಗಳಲ್ಲಿ ಕಾರ್ಮಿಕರನ್ನು, ತುಂಬು ಗರ್ಭಿಣಿಯರನ್ನೂ ಬಿಡದಂತೆ ಮಕ್ಕಳು ಮಹಿಳೆಯರನ್ನು ದಿನಕ್ಕೆ 16-18 ಗಂಟೆಗಳ ಕಾಲ ದುಡಿಸಿಕೊಳ್ಳತ್ತಿದ್ದ ಕಾಲವದು. ಯಂತ್ರಗಳೊಂದಿಗೆ ಯಂತ್ರಗಳಂತೆ ದುಡಿದು ಕಾರ್ಮಿಕರು ಬೇಸತ್ತಿದ್ದರು. ವಿಶ್ರಾಂತಿಗಾಗಿ ಬಿಡುವು ನೀಡುವ ವ್ಯವಸ್ಥೆಯೂ ಇಲ್ಲ! ಈ ಘೋರ ಪರಿಸ್ಥಿತಿಯ ವಿರುದ್ದ ದುಡಿಮೆಯ ಅವಧಿಯನ್ನು 8 ಗಂಟೆಗಳಿಗೆ ಸೀಮಿತಗೊಳಿಸಬೇಕು ಎಂದು ಎಲ್ಲೆಡೆ ಧ್ವನಿ ಮೊಳಗತೊಡಗಿತು. 1886 ರ ಮೇ 1 ರಂದು ಅಮೇರಿಕಾದಲ್ಲಿ ಸುಮಾರು 13000 ಕಾರ್ಖಾನೆಗಳಿಗೆ ಸೇರಿದ 3 ಲಕ್ಷಕ್ಕೂ ಹೆಚ್ಚು ಕಮರ್ಮಿಕರು ಬಿಳಿ
ಬಾವುಟಗಳನ್ನು ಹಿಡಿದು 8 ಗಂಟೆಯ ದುಡಿಮೆಯ ದಿನದ ಬೇಡಿಕೆಗಾಗಿ ಬೀದಿಗಿಳಿದರು. ಪೋಲಿಸರು ಶಾಂತಿಯುತವಾಗಿ ನಡೆಯುತ್ತಿರುವ ಚಳುವಳಿಯ ಮೇಲೆ ಗುಂಡು ಹಾರಿಸಿದರಿಂದ ಕಾರ್ಮಿಕರ ಬಿಳಿ ಬಾವುಟ
ಕೆಂಪಾಯಿತು. ಇದು ಇತಿಹಾಸ ಎಂದು ನುಡಿದರು.
ಖ್ಯಾತ ಹಿರಿಯ ಕಾರ್ಮಿಕ ನ್ಯಾಯವಾದಿಗಳಾದ ಪಿ. ವಿಲಾಸಕುಮಾರ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ್ ಬಷೀರ ಅನ್ಸಾರಿ, ಐ.ಎನ್.ಟಿ.ಯು.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಗೂಳಿ, ಕೆ.ಎಸ್.ಆರ್.ಟಿ.ಸಿ ಸ್ಟಾಫ್ &ಚಿmಠಿ; ವರ್ಕರ್ಸ ಫೆಡರೇಷನ್ ನ ರಾಜ್ಯ ಕಾರ್ಯಾಧ್ಯಕ್ಷ ಸಿದ್ದಪ್ಪ ಪಾಲ್ಕಿ, ಎನ್.ಸಿ.ಎಸ್. ನ ಜಿಲ್ಲಾ ಅದ್ಯಕ್ಷ ಮೋಸಿನ್ ಪಟೇಲ್, ನೆರವು ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ರಾಜು ದೊರೆ, ಸೆಂಟ್ರಿಂಗ್ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಅಲ್ಲಾವುದ್ದಿನ್, ಬಂದೇ ನವಾಜ್, ಅಯುಬ್ ಖಾನ್ ರವರು ಆಗಮಿಸಿದ್ದರು.
ಎನ್.ಸಿ.ಎಲ್ ರಾಜ್ಯ ಉಪಾಧ್ಯಕ್ಷರಾದ ಶಂಕರ ಕಟ್ಟಿ ಸಂಗಾವಿ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಈ ಶೋಷಕ ವ್ಯವಸ್ಥೆಯ ವಿರುದ್ದ ಕಾರ್ಮಿಕರು ಒಂದಾಗಿ ಹೋರಾಟಗಳನ್ನು ಕಟ್ಟಬೇಕಾಗಿದೆ. ಒಂದು ನೈಜ್ಯ
ಕ್ರಾಂತಿಕಾರಿ ಸಂಘಟನೆಯ ಅಡಿಯಲ್ಲಿ ಇಡೀ ದೇಶದಾದ್ಯಂತ ಕಾರ್ಮಿಕರು ಒಂದುಗೂಡಬೇಕಿದೆ. ಅದಕ್ಕೆ ಸ್ಪೂರ್ತಿಯಾಗಿ ಈ ಮೇ ದಿನಾಚರಣೆಯನ್ನು ಆಚರಿಸಬೇಕಾಗಿದೆ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಎ.ಐ.ಟಿ.ಯು.ಸಿ ನ ಅಧ್ಯಕ್ಷರಾದ ಪ್ರಭುದೇವ ಯಳಸಂಗಿ ರವರು ಮಾತನಾಡಿದರು.
ಶಿವಲಿಂಗಮ್ಮ ಲೇಂಗಟಿಕರ್ ರವರು ವಂದನಾರ್ಪಣೆ ಸಲ್ಲಿಸಿದರು. ಮಲ್ಲಿಕಾರ್ಜುನ ಎಸ್.ಮಾಳಗೆ ಸ್ವಾಗತವನ್ನು ಕೋರಿದರು. ಎಸ್.ಎಂ ಶರ್ಮಾ ರವರು ನಿರೂಪಿಸಿದರು. ಸಭೆಯಲ್ಲಿ ವಿವಿಧ ಕಾರ್ಮಿಕ ಸಂಘಗಳ ನೂರಾರು ಸದಸ್ಯರು ಭಾಗವಹಿಸಿದ್ದರು. ನಂತರ ಇತ್ತೀಚಿಗೆ ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90% ಕ್ಕಿಂತಲೂ ಹೆಚ್ಚಿಗೆ ಅಂಗಗಳನ್ನು ತೆಗೆದುಕೊಂಡು ಕಾರ್ಮಿಕ ಮಕ್ಕಳನ್ನು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.