Home ಜಿಲ್ಲೆ ಮಿನಿ ಬಸ್-ಟ್ರಾಕ್ಟರ್ ಡಿಕ್ಕಿ ಓರ್ವ ವೃದ್ದೆ ಸಾವು ಐವರಿಗೆ ಗಾಯ

ಮಿನಿ ಬಸ್-ಟ್ರಾಕ್ಟರ್ ಡಿಕ್ಕಿ ಓರ್ವ ವೃದ್ದೆ ಸಾವು ಐವರಿಗೆ ಗಾಯ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.16: ಜಿಲ್ಲೆಯ ಕುರುಗೋಡು ಪಟ್ಟಣದ ಹೊರ ವಲಯದ ಯಲ್ಲಾಪುರ ಕ್ರಾಸ್ ಬಳಿ ಇಂದು ಬೆಳಿಗ್ಗೆ ಮಿನಿ ಬಸ್ ಹಾಗು ಟ್ರಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆಯಲ್ಲಿ ಓರ್ವ ವೃದ್ದೆ ಸಾವನ್ನಪ್ಪಿದ್ದು. ಐವರು ಗಾಯಗೊಂಡಿದ್ದಾರೆ. ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಟಿ ಮಿನಿ ಬಸ್ ನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಬಂದವರಿಗೆ ಜಾವರಾಯ ಯಮನಂತೆ ಬಂದ ಟ್ರಾಕ್ಟರ್ ಡಿಕ್ಕಿಯಾಗಿದೆ. ಕಳೆದೆರಡು ದಿನಗಳ ಹಿಂದೆ ಕೊಪ್ಪಳ ಜಿಲ್ಲೆಯ ಚಾಳರಿ ಗ್ರಾಮದಿಂದ ಟಿಟಿ ಬಸ್ ನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹದಿನೈದು ಜನರು ಹೋಗಿದ್ದರು. ದರ್ಶನ ಮಾಗಿಸಿಕೊಂಡು ವಾಪಸ್ ಊರಿಗೆ ಬರುವ ಸಂದರ್ಭದಲ್ಲಿ ಯಲ್ಲಾಪುರ ಕ್ರಾಸ್ ಹತ್ತಿರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸಗಣಿ ಗೊಬ್ಬರ ಹೊತ್ತು ಸಾಗುತ್ತಿದ್ದ ಟ್ರಾಕ್ಟರ್ ನ ಚಾಲಕನ ನಿರ್ಲಕ್ಷದಿಂದ ಅಪಘಾತ ಸಂಭವಿಸಿದೆ.

ಸ್ಥಳದಲ್ಲಿ ವೃದ್ಧ ಮಹಿಳೆ ರತ್ನಮ್ಮ (70) ಅಸುನೀಗಿದ್ದಾಳೆ ಐದು ಜನರಿಗೆ ಗಾಯಗಳಾಗಿದ್ದು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದರು.ಟ್ರಾಕ್ಟರ್ ಚಾಲಕ ಪರಾರಿಯಾಗಿದ್ದಾನೆ.