
ಮಲ್ಪೆ- ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿ ಕಳೆದ ೨೩ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಶಿವನಗರ ನಿವಾಸಿ ಎಂ.ಬಾಬು(೫೨) ಬಂಧಿತ ಆರೋಪಿ. ಮಲ್ಪೆ ಎಸ್ಸೈ ಅನೀಲ್ ಕುಮಾರ್ ಡಿ. ನೇತೃತ್ವದಲ್ಲಿ ಕಳೆದ ೫ ತಿಂಗಳಿನಿಂದ ಪ್ರಯತ್ನಿಸಿ, ಮಾಹಿತಿ ಕಲೆ ಹಾಕಿ, ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿ ಸುರೇಶ್ ಕುಮಾರ್ ಮತ್ತು ವಿಶ್ವನಾಥ್ ಎಚ್. ಎ.೧೪ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯನ್ನು ಎ.೧೫ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಎ.೨೮ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

























