
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.9: ಮತಗಟ್ಟೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಮಾಹಿತಿಯ ಗಣತಿ ನಮೂನೆ ನೀಡಲಿದ್ದು, ಮತದಾರರು ಕಡ್ಡಾಯವಾಗಿ ನಮೂನೆಯನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ನೀಡಬೇಕಿದೆ. ನಮೂನೆಯ ದ್ವಿಪ್ರತಿಯನ್ನು ನೀಡಲಿದ್ದು ಒಂದು ಪ್ರತಿಯನ್ನು ಸ್ವೀಕೃತಿಯಾಗಿ ಮತದಾರರು ತಮ್ಮಲ್ಲೇ ಉಳಿಸಿಕೊಳ್ಳಬೇಕು. 18ವರ್ಷ ಮೇಲ್ಟಟ್ಟವರು, ಮನೆಯ ಮುಖ್ಯಸ್ಥರು ನಮೂನೆಗೆ ಸಹಿ ಮಾಡಬಹುದಾಗಿದೆ. ಬಿಎಲ್ಒಗಳು ಪ್ರತಿ ಮತದಾರರ ಮನೆಗೆ ಮೂರು ಬಾರಿ ಭೇಟಿ ಮಾಡಲಿದ್ದಾರೆ ಎಂದು ಮತದಾರರ ನೋಂದಣಿ ಅಧಿಕಾರಿ ಸೋಮ ಸುಂಧರಮ್ ಹೇಳಿದರು.
ನಗರದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಿರುಗುಪ್ಪ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 2,28,277 ಮತದಾರರು ಇದ್ದು, ಇಲ್ಲಿಯವರೆಗೆ 2,23,867 ಮತದಾರರಿಗೆ ಎನ್ಯುಮರೇಷನ್ ಫಾರಂ ಗಳನ್ನು ವಿತರಿಸಲಾಗಿದ್ದು. ಶೇ 98% .31%ರಷ್ಟು ಸಾಧನೆಯಾಗಿದೆ. ಇದರಲ್ಲಿ ತಂತ್ರಜ್ಞಾನದಲ್ಲಿ ಇಲ್ಲಿಯವರೆಗೆ 57,923 ಅಳವಡಿಸಲಾಗಿದೆ.
ಮತಪಟ್ಟಿಯಲ್ಲಿ ಗುರುತಿಸಲಾದ 642 ಮತದಾರರಲ್ಲಿ ಮತದಾರರ ಪಟ್ಟಿಯಲ್ಲಿ ಇರಲಾರದವರು 4ಜನ, ಬೇರೆ ಕಡೆ ಸ್ಥಳಾಂತರವಾದವರು 250ಜನ, ಮರಣ ಹೊಂದಿದವರು 263ಜನ, ಮತದಾರರ ಪಟ್ಟಿಯಲ್ಲಿ ಎರಡು ಕಡೆ ನೋಂದಣಿ ಆದವರು 84ಜನ, ಇತರೆ 6ಜನ ಒಟ್ಟು 642 ಮತದಾರರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಸಹಾಯಕ ಚುನಾವಣಾ ಅಧಿಕಾರಿ ತಹಶೀಲ್ದಾರ್ ಗೌಸೀಯ ಬೇಗಂ, ಮುಖಂಡರಾದ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ದೊಡ್ಡ ಹುಲುಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಶಿವ ನಾರಾಯಣ, ಚುನಾವಣಾ ಸಿಬ್ಬಂದಿಗಳಾದ ನವೀನ್, ಮಹಂತೇಶ ಇದ್ದರು.






























