Home ಜಿಲ್ಲೆ ಮೈಸೂರು ಬಾಬು ಜಗಜೀವನ ರಾಮ್ ಅವರ 119ನೇ ಜಯಂತೋತ್ಸವ

ಬಾಬು ಜಗಜೀವನ ರಾಮ್ ಅವರ 119ನೇ ಜಯಂತೋತ್ಸವ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.01 :
– ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾಕ್ಟರ್ ಬಾಬು ಜಗಜೀವನ ರಾಮ್ ಇವರಿಬ್ಬರು ಮಹನೀಯರು ಎರಡು ಕಣ್ಣುಗಳಂತೆ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆ ಎಚ್ ಮುನಿಯಪ್ಪ ತಿಳಿಸಿದರು.


ತಾಲೂಕಿನ ಬಿಎಮ್ ರಸ್ತೆಯ ಶಿಕ್ಷಕರ ಸಭಾಂಗಣದ ಸಮೀಪ ಕರ್ನಾಟಕ ಮಾದರ ಮಹಾಸಭಾ.ರಿ. ಮತ್ತು ಆದಿ ಜಾಂಬವ ಮಾದಿಗ ಸಂಘಟನೆಗಳ ಒಕ್ಕೂಟ ಪಿರಿಯಾಪಟ್ಟಣ ತಾಲೂಕು ಇವರ ವತಿಯಿಂದ ಡಾಕ್ಟರ್ ಬಾಬು ಜಗಜೀವನ ರಾಮ್ ಅವರ 119ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಬ್ಬರು ನಾಯಕರು ಒಂದು ವರ್ಗಕೆ ಸೇರಿದವರಲ್ಲ ಅಂಬೇಡ್ಕರ್ ಅವರು ಈ ದೇಶಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ಮತ್ತು ಕಾನೂನಿನ ಮೂಲಕ ಎಲ್ಲರಿಗೂ ಸಮಾನವಾಗಿ ಹಕ್ಕು ನೀಡುವಂತೆ ಮಾಡಿದ ಮಹಾನ್ ವ್ಯಕ್ತಿ. ಅದೇ ರೀತಿ ಬಾಬು ಜಗಜೀವನ್ ರಾಮ್ ಅವರು ಈ ದೇಶಕ್ಕೆ ಅನ್ನ ನೀಡಿದ ಗಣ್ಯ ವ್ಯಕ್ತಿ ಇವರನ್ನು ಹಸಿರು ಕ್ರಾಂತಿಯ ಹರಿಕಾರ ಎಂದು ಕರೆಯುತ್ತಾರೆ ಬಾಬುಜಿ ಅವರು ಈ ಹಿಂದೆ ಉಪ ಪ್ರಧಾನಿಯಾಗಿ ರೈಲ್ವೆ ಕೃಷಿ ಹಾಗೂ ಇತರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ ಶೋಷಿತರ ಪರವಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ ಇತ್ತೀಚಿನ ದಿನಗಳಲ್ಲಿ ಒಳ ಮೀಸಲಾತಿ ಗೊಂದಲಗಳು ಮಾರ್ಪಟ್ಟಗಿದವು ಇದನ್ನು ಎಡ ಬಲ ಎನದೆ ಎಲ್ಲಾ ಸಚಿವರ ಸಮ್ಮುಖದಲ್ಲಿ ಎ ಬಿ ಸಿ ಎಂದು ವರ್ಗಾಯಿಸಿ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಲಾಗಿದೆ ಇದಕ್ಕೆ ಯಾರು ಗೊಂದಲ ಸೃಷ್ಟಿ ಮಾಡಿಕೊಳ್ಳದೆ ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಕರೆಕೊಟ್ಟರು.


ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ ವೆಂಕಟೇಶ್ ಮಾತನಾಡಿ ಬಾಬು ಜಗಜೀವ ರಾಮ್ ಅವರು ಈ ದೇಶದ ಆರ್ಥಿಕತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದರು ಜನರ ಪರವಾಗಿ ಬಡವರಿಗೆ ಬದುಕು ಕೊಟ್ಟ ಒಬ್ಬ ಅಗ್ರಗಣ್ಯ ವ್ಯಕ್ತಿ ಇವರು ಹಸಿರು ಕ್ರಾಂತಿಯಾಗಿ ನಾಡಿಗೆ ದೇಶಕ್ಕೆ ಅನ್ನ ನೀಡಿದ ಮೂಲಕ ರೈತರ ಬಾಳಲ್ಲಿ ಹಸನು ಮಾಡಿದ ವ್ಯಕ್ತಿಯಾಗಿದ್ದಾರೆ ಅದೇ ರೀತಿ ದೇಶದ ಉಪ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು ಅದರಂತೆ ನಮ್ಮ ಸರ್ಕಾರದ ಎಲ್ಲಾ ಗ್ಯಾರಂಟಿಗಳು ಜನರಿಗೆ ತಲುಪುವಂತೆ ಮಾಡಲಾಗಿದೆ ಮತ್ತು ಎಚ್ ಕೆ ಮುನಿಯಪ್ಪನವರ ಹಾಗೂ ವ್ಯಕ್ತಿ ಮಹದೇವಪ್ಪ ಹಾಗೂ ಇನ್ನಿತರ ಎಲ್ಲಾ ಎಡಬಲ ಸಚಿವರು ಮತ್ತು ಲಂಬಾಣಿ ಮತ್ತು ಭೋವಿ ಸಮಾಜದ ಎಲ್ಲಾ ಸಚಿವರ ಮತ್ತು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ರಾಜ್ಯದ ಎಲ್ಲಾ ಸಚಿವರ ಜೊತೆಗೂಡಿ ಗೊಂದಲಕ್ಕೆ ತೆರೆ ಎಳೆದು ಸರಿಸಮನಾಗಿ ಹಂಚಿಕೆ ಮಾಡಲಾಗಿದೆ ಅದರಿಂದ ಯಾರೂ ಬೇರೆ ವಿರೋಧ ಪಕ್ಷದ ಮಾತಿಗೆ ಕಿವಿ ಕೊಡದೆ ಅಣ್ಣ-ತಮ್ಮಂದಿರ ಹಾಗೆ ಒಗ್ಗಟ್ಟಿನಿಂದ ಇರಬೇಕು ಎಂದರು.

ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಶ್ರೀ ಮಸಣಿಕಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಬೆಳ್ಳಿರಥ ಮತ್ತು ಕಲಾ ತಂಡಗಳೊಂದಿಗೆ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರವುಳ್ಳ ಬೆಳ್ಳಿ ರಥದಲ್ಲಿ ಬಿ ಎಂ ರಸ್ತೆ ಮೂಲಕ ಮೆರವಣಿಗೆ ಮಾಡಲಾಯಿತು. ಈ ಸಂದರ್ಭ ವಿಧಾನಪರಿಷತ್ ಸದಸ್ಯ ಡಾಕ್ಟರ್ ಡಿ ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾಕ್ಟರ್ ಬಿ ಜೆ ವಿಜಯ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಸಾಹಿತಿ ಕೆ ಆರ್ ರಾಚಯ್ಯ, ಮೈಸೂರು ಪೇಂಟ್ ಮತ್ತು ವಾಷಿಂಗ್ ಅಧ್ಯಕ್ಷ ಹೆಚ್ ಡಿ ಗಣೇಶ, ಮೈಸೂರು ಮಾಜಿ ಮೇಯರ್ ನಾರಾಯಣ, ಎಡತೊರೆ ಎಂ ನಿಂಗರಾಜ್, ಕೆಪಿಸಿಸಿ ಸದಸ್ಯ ಎಚ್ ಟಿ ಅನಿಲ್, ಮಾಜಿ ಎಂಎಲ್ಸಿ ಸಿ ರಮೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೆಹೆಮಾನ್ ಜನ ಬಾಬು, ಕರ್ನಾಟಕ ಮಾದರ ಮಹಾಸಭಾ ಮತ್ತು ಆದಿ ಜಾಂಬವ ಮಾದಿಗ ಸಂಘಟನೆಗಳ ಮುಖ್ಯಸ್ಥರಾದ ಹಿಟ್ನೆ ಹೆಬ್ಬಾಗಿಲು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶಿಗೂರು ವಿಜಯ್ ಕುಮಾರ್, ಭೂತನಹಳ್ಳಿ ಶಿವಣ್ಣ, ಡಿ ಕುಮಾರ್,ಆದಿಶೇಷ, ಸಣ್ಣಪ್ಪ, ಆನಂದ, ಆರ್ ಡಿ ಚಂದ್ರು, ರವಿಕುಮಾರ್, ನರಸಿಂಹ, ಬಸವರಾಜು, ಕುಮಾರ್, ನಾರಾಯಣ, ಹರೀಶ್, ಮಹೇಶ್, ರಾಜೇಂದ್ರ, ಜಯ ಸ್ವಾಮಿ, ಲೋಕೇಶ್ ಹೊನ್ನೇನಹಳ್ಳಿ, ಎಸ್ ಮಹದೇವ್, ಜಯಣ್ಣ, ಅಂಬಾರಿ ರವಿ, ಸೌರಭ, ಮಂಜು, ನಾಗೇಂದ್ರ, ಸೋಮಪ್ಪ, ಶಿವ, ಬೂತನಹಳ್ಳಿ ರವಿ, ಉದಯ್, ಗಿರೀಶ್, ವಿಜಯ್ ಕುಮಾರ್,ರಾಮಚಂದ್ರ, ನಂಜುಂಡಸ್ವಾಮಿ, ಅನಿಲ್ ಕುಮಾರ್, ಲೋಕೇಶ್, ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಇತರರು ಹಾಜರಿದ್ದರು.