
ಕಲಬುರಗಿ,ಮೇ.1-ನಗರದ ರಾಣೆಸ್ಪೀರ್ ದರ್ಗಾ ಹತ್ತಿರದ ಆಶ್ರಯ ಕಾಲೋನಿಯಲ್ಲಿರುವ ಶರಣಯ್ಯ ಗುತ್ತೇದಾರ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆ ಎಎಸ್‍ಐ ಅಶೋಕ, ಸಿಬ್ಬಂದಿಗಳಾದ ಬೀರಣ್ಣ, ಲಕ್ಷ್ಮೀಕಾಂತ ಅವರು ದಾಳಿ ನಡೆಸಿ 4,895 ರೂ.ಮೌಲ್ಯದ ಮದ್ಯ ಮತ್ತು 520 ರೂ.ನಗದು ಜಪ್ತಿ ಮಾಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















