
ಕಲಬುರಗಿ,ಮೇ.1-ರಾಜ್ಯ ಸರ್ಕಾರವು ಕಲಬುರಗಿ ನಗರ ಉಪ ಪೆÇಲೀಸ್ ಆಯುಕ್ತರಾಗಿ ಯುವ ಮಹಿಳಾ ಐಪಿಎಸ್ ಅಧಿಕಾರಿ ಶಾಲೂ ಅವರನ್ನು ನೇಮಕ ಮಾಡಿದೆ. ಕರ್ನಾಟಕ ಕೇಡರ್‍ನ 2021 ಬ್ಯಾಚ್‍ನ ಶಾಲೂ ಅವರು ಹೊಳೆನರಸಿಪುರದಲ್ಲಿ ಸಹಾಯಕ ಪೆÇಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್‍ಪಿ) ಸೇವೆ ಸಲ್ಲಿಸಿ, ನಂತರ ಅಪರಾಧ ತನಿಖಾ ಇಲಾಖೆ (ಸಿಐಡಿ) ವಿಶೇಷ ವಿಚಾರಣಾ ವಿಭಾಗದಲ್ಲಿ ಪೆÇಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‍ಪಿ) ಬಡ್ತಿ ಪಡೆದಿದ್ದರು.
ಮೂಲತಃ ಉತ್ತರ ಪ್ರದೇಶದ ಜೌನ್‍ಪುರ ಮೂಲದ ಶಾಲೂ ಅವರು ಕಂಪ್ಯೂಟರ್ ಸೈನ್ಸ್‍ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ತಮ್ಮ ಕಾರ್ಯಕ್ಷಮತೆ ಮತ್ತು ನಿಷ್ಠೆಯಿಂದ ಗುರುತಿಸಿಕೊಂಡಿರುವ ಅವರು, ಕಲಬುರಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ಹಾಗೂ ಸಾರ್ವಜನಿಕರ ಭದ್ರತೆಗಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.





















