Home ಜಿಲ್ಲೆ ಕಲಬುರಗಿ ಮಟಕಾ:ಇಬ್ಬರ ಬಂಧನ

ಮಟಕಾ:ಇಬ್ಬರ ಬಂಧನ

ಕಲಬುರಗಿ,ಮೇ.1-ನಗರದ ಜಿಡಿಎ ಬಡಾವಣೆಯ ಎಲ್‍ಐಸಿ ಆಫೀಸ್ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಮತ್ತು ಆಳಂದ ಚೆಕ್‍ಪೋಸ್ಟ್ ಹತ್ತಿರದ ವೈಷ್ಣವಿ ಗುಡಿಗೆ ಹೋಗುವ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಜಿಡಿಎ ಬಡಾವಣೆಯ ಎಲ್‍ಐಸಿ ಆಫೀಸ್ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಅಶೋಕನಗರ ಪೊಲೀಸ್ ಠಾಣೆ ಮುಖ್ಯಪೇದೆ ಶಿವಪ್ರಕಾಶ, ಸಿಬ್ಬಂದಿಗಳಾದ ವೈಜನಾಥ, ನೀಲಕಂಠರಾಯ ಅವರು ದಾಳಿ ನಡೆಸಿ ಎಂಎಸ್‍ಕೆ ಮಿಲ್ ಫಾಟಕ್ ಏರಿಯಾ ನಿವಾಸಿ ಫರೀದ್ ತಂದೆ ಬಾಬು ಶೇಖ್ (26) ಎಂಬಾತನನ್ನು ಬಂಧಿಸಿ 1120 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ.
ಆಳಂದ ಚೆಕ್‍ಪೋಸ್ಟ್ ಹತ್ತಿರದ ವೈಷ್ಣವಿ ಗುಡಿಗೆ ಹೋಗುವ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆ ಪಿಐ ನಟರಾಜ ಲಾಡೆ, ಸಿಬ್ಬಂದಿಗಳಾದ ಚಂದ್ರಕಾಂತ, ಗುಂಡೇರಾಯ ಅವರು ದಾಳಿ ನಡೆಸಿ ಕೆರೆಭೋಸ್ಗಾ ಗ್ರಾಮದ ಶರಣಪ್ಪ ಹರಳಯ್ಯ (36) ಎಂಬಾತನನ್ನು ಬಂಧಿಸಿ 1500 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ.
ಅಶೋಕನಗರ ಮತ್ತು ಸಬ್ ಅರ್ಬನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.