Home Uncategorized ಬಳ್ಳಾರಿ ಗುರುಕುಲ ಶಾಲೆ ಹಾಸ್ಟಲ್ ನಲ್ಲಿ ಬಾಲಕನಿಂದ ಬಾಲಕನ ಹತ್ಯೆ, ಹಲವರಿಗೆ ಗಾಯ

ಬಳ್ಳಾರಿ ಗುರುಕುಲ ಶಾಲೆ ಹಾಸ್ಟಲ್ ನಲ್ಲಿ ಬಾಲಕನಿಂದ ಬಾಲಕನ ಹತ್ಯೆ, ಹಲವರಿಗೆ ಗಾಯ

* ಏಳು ಮಕ್ಕಳಿಗೆ ಗಾಯ

* ಹಾಸ್ಟಲ್ ವಾರ್ಡನ್ ಶಿಕ್ಷಕಿ ಮೇಲೂ ಹಲ್ಲೆ

* ಬಿ.ಗೋನಾಳ್ ಬಾಲಕನಿಂದ ಹಲ್ಲೆ, ಪರಾರಿ

* ಆಂಧ್ರದ ಆಲೂರಿನ ಬಾಲಕ ಹೇಮಂತ ಸಾವು

ಬಳ್ಳಾರಿ, ಮಾ.08: ನಗರದ ತಾಳೂರು ರಸ್ತೆಯಲ್ಲಿನ ಗುರುಕುಲ ಕಾನ್ಸೆಪ್ಟ್ (ಸಿಬಿಎಸ್ ಸಿ) ಪಠ್ಯಕ್ರಮದ  ಖಾಸಗಿ ಶಾಲೆಯ ವಸತಿ ನಿಲಯದಲ್ಲಿ ನಿನ್ನೆ ತಡ  ರಾತ್ರಿ 9 ನೇ ತರಗತಿಯ ವಿದ್ಯಾರ್ಥಿಯೊಬ್ಬ ಇನ್ನಿತರ ವಿದ್ಯಾರ್ಥಿಗಳು ಮಲಗಿದಾಗ ಕಬ್ಬಿಣದ ರಾಡ್ ತೆಗೆದು ಕೊಂಡು  ಹಲ್ಲೆ ಮಾಡಿರುವುದರಿಂದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು. ವಸತಿ ನಿಲಯದ ಶಿಕ್ಷಕಿ ಸೇರಿದಂತೆ 8 ಜನರು ಗಾಯಗೊಂಡು ಬಳ್ಳಾರಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿ ಊಟ ಮಾಡಿ ಮಲಗಿದ ನಂತರ ವಿದ್ಯಾರ್ಥಿ ಕಬ್ಬಿಣದ ರಾಡ್ ನಿಂದ ಎರಡನೇ ಮತ್ತು ಮೊದಲ ಅಂತಸ್ತಿನಲ್ಲಿ ಮಲಗಿದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾನೆ. ಇದನ್ನು ಕಂಡು ಆತನನ್ನು ತಡೆಯಲು ಹೋದ ಶಾಲೆಯ ಶಿಕ್ಷಕಿ, ವಾರ್ಡನ್ ಬ್ಲಸ್ಸಿ ಅವರ ಮೇಲೂ ಹಲ್ಲೆ ಮಾಡಿದ್ದಾನೆ.

ದಾಳಿಯಲ್ಲಿ ಗಾಯಗೊಂಡ ಮಕ್ಕಳೆಂದರೆ. ರೋಹಿತ್(14), ವಿನಯ್ (14), ವಿಷ್ಣು( 7 ನೇ ತರಗತಿ), ಇಸ್ಮಯಿಲ್ (3 ನೇ ತರಗತಿ), ಅಣ್ಣ ತಮ್ಮಂದಿರಾದ  ಪ್ರಸಾದ್  (6 ನೇ ತರಗತಿ),  ಮಂಜು  (4 ನೇ ತರಗತಿ), ಶಶಿಕಲಾ (14) ಇವರು.  ತೀವ್ರವಾಗಿ ಗಾಯಗೊಂಡ ಆಂದ್ರಪ್ರದೇಶದ ಆಲೂರು ತಾಲೂಕಿನ ಸಮ್ಮತಗೇರಿ ಗ್ರಾಮದ ಒಂಬತ್ತನೆ ತರಗತಿ ವಿದ್ಯಾರ್ಥಿ ಹೇಮಂತ್ ಸಾವನ್ನಪ್ಪಿದ್ದಾನೆ.

ಗಾಯಗೊಂಡವರನ್ನು ಬಳ್ಳಾರಿಯ ಬಿಎಂಆರ್ಸಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಆಸ್ಪತ್ರೆ ಬಳಿ ಮೃತ ಬಾಲಕನ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶವ್ಯಕ್ತ ಪಡಿಸಿ. ಆಡಳಿತ ಮಂಡಳಿಯವರು ಬರುವ ವರಗೆ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಪ್ರತಿಭಟನೆಗೆ ಇಳಿದರು. ಈ ವೇಳೆ ಎಸ್ಪಿ ಡಾ.ಸುಮನ್ ಡಿ ಪೆನ್ನೇಕರ್ ಆರೋಪಿ ಮತ್ತು ಶಾಲೆಯ ವಿರುದ್ದ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ ಮೇಲೆ ಶವವನ್ನು  ತಗೆದುಕೊಂಡು ಹೋಗಲಾಯ್ತು.

ಘಟನೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಬಳ್ಳಾರಿ ವಲಯದ ಐಜಿಪಿ ಡಾ.  ಹರ್ಷ ಅವರು  ನಿನ್ನೆ ತಡರಾತ್ರಿ ಈ  ಘಟನೆ ನಡೆದಿದೆ. ಅಪ್ತಾಪ್ತ ಬಾಲಕನಿಂದ  ಎಂಟು ಮಕ್ಕಳ ಮೇಲೆ ಹಲ್ಲೆಯಾಗಿದೆ.ಘಟನೆಯಲ್ಲಿ ದುರಾದೃಷ್ಟವಶಾತ್ ಓರ್ವ ಬಾಲಕ ಸಾವನ್ನಪ್ಪಿದ್ದಾನೆ.ಹಲ್ಲೆ ಮಾಡಿದವನು ಹಲ್ಲೆಗೊಳಗಾದವರು ಎಲ್ಲರೂ ಆಪ್ತಾಪ್ತರೇ ಹಾಸ್ಟೆಲ್ ವಾರ್ಡನ್ ಮೇಲೂ ಹಲ್ಲೆ ಮಾಡಲಾಗಿದೆ. ಓರ್ವ ಬಾಲಕನಿಗೆ  ಗಂಭೀರವಾಗಿ ಗಾಯವಾಗಿದೆ.  ಉಳಿದವರು ಪ್ರಣಾಪಾಯದಿಂದ ಪರಾಗಿದ್ದಾರೆ. ಸ್ಥಳಕ್ಕೆ ಸುಕೋ ಟೀಂ ಎಫ್ ಎಸ್ ಎಲ್  ತಂಡ ಭೇಟಿ  ನೀಡಿ  ಮಹಜರ್ ಮಾಡಿ ತನಿಖೆ ಮಾಡುತ್ತಿದೆ ಎಂದಿದ್ದಾರೆ.