Home ಮುಖಪುಟ ಸುದ್ದಿ ಬಂಗಾಳ ಅಸ್ಸಾಂನಲ್ಲಿ ಬಿಜೆಪಿ ಅಲೆ,ಕೇರಳಂನಲ್ಲಿ ಯುಡಿಎಫ್, ತ.ನಾಡು ಮತ್ತೆ ಡಿಎಂಕೆ ತೆಕ್ಕೆಗೆ

ಬಂಗಾಳ ಅಸ್ಸಾಂನಲ್ಲಿ ಬಿಜೆಪಿ ಅಲೆ,ಕೇರಳಂನಲ್ಲಿ ಯುಡಿಎಫ್, ತ.ನಾಡು ಮತ್ತೆ ಡಿಎಂಕೆ ತೆಕ್ಕೆಗೆ

ನವದೆಹಲಿ, ಏ.‌ 29- ಪಂಚ ರಾಜ್ಯಗಳ ವಿಧಾನ ಸಭೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ನೆರೆಯ ತಮಿಳುನಾಡಿನಲ್ಲಿ ಈ ಬಾರಿಯೂ ಡಿಎಂಕೆ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.


ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಅಣ್ಣಾಡಿಎಂಕೆ- ಬಿಜೆಪಿ ಹಾಗೂ ನಟ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ ಮತದಾರ ಮತ್ತೆ ಆಶೀರ್ವಾದ ಮಾಡಲಿದ್ದಾನೆ ಎಂದು ಸಮೀಕ್ಷೆಗಳು ಹೇಳಿವೆ.


2011ರಿಂದಲೂ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿ ಮತ್ತು ಟಿಎಂಸಿ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗಿದ್ದ ಈ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಸಿಗಬಹುದು ಎಂದು ಸಮೀಕ್ಷೆಗಳು ಅಂದಾಜು ಮಾಡಿವೆ.


ಕೇರಳ ರಾಜ್ಯದಲ್ಲಿ ಆಡಳಿತಾರೂಢ ಸಿಪಿಐ ನೇತೃತ್ವದ ಸಿಪಿಐ ನೇತೃತ್ವದ ಎಲ್ ಡಿಎಫ್ ಮೈತ್ರಿಕೂಟ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಹಾಗೂ ಬಿಜೆಪಿ.ನೇತೃತ್ವದ ಎನ್ ಡಿಎ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಡಿತ್ತಾದರೂ ಯುಡಿಎಫ್ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಮತಗಟ್ಟೆ ಸಮೀಕ್ಷೆಗಳು ಬಿಂಬಿಸಿವೆ.


ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಆದರೆ ಈ ಬಾರಿಯೂ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.


ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬಿಜೆಪಿ ಮತದಾರರು ಅಧಿಕಾರ ನೀಡಲಿದ್ದಾರೆ ಎಂದು ಬಿಂಬಿಸಿವೆ.

ಅಸ್ಸಾಂ

ಜೆವಿಸಿ ಸಮೀಕ್ಷೆ:

ಎನ್​ಡಿಎ: 88–101 ಸ್ಥಾನಗಳು

ಕಾಂಗ್ರೆಸ್: 23 ಮತ್ತು 33 ಸ್ಥಾನಗಳು

ಆಕ್ಸಿಸ್ ಮೈ ಇಂಡಿಯಾ

ಬಿಜೆಪಿ: 88-100 ಸ್ಥಾನಗಳು

ಕಾಂಗ್ರೆಸ್: 24-36 ಸ್ಥಾನಗಳು

ವೋಟ್ ವೈಬ್

ಬಿಜೆಪಿ: 90-100

ವೋಟ್ ವೈಬ್

ಬಿಜೆಪಿ: 90-100

ಕಾಂಗ್ರೆಸ್: 23-33

ಆಕ್ಸಿಸ್ ಮೈ ಇಂಡಿಯಾ

ಬಿಜೆಪಿ: 88-101

ಕಾಂಗ್ರೆಸ್: 23-33

ಚಾಣಕ್ಯ ಸ್ಟ್ರಾಟಜೀಸ್:

ಬಿಜೆಪಿ: 88-98 ಕಾಂಗ್ರೆಸ್: 22-32

ಮ್ಯಾಟ್ರಿಜ್ ಸಮೀಕ್ಷೆ

ಬಿಜೆಪಿ: 85-95

ಕಾಂಗ್ರೆಸ್: 25-32

PMARQ ಸಮೀಕ್ಷೆ:

ಬಿಜೆಪಿ: 82-94

ಕಾಂಗ್ರೆಸ್: 30-40

ಕೇರಳ

ಆಕ್ಸಿಸ್ ಮೈ ಇಂಡಿಯಾ

ಯುಡಿಎಫ್: 78–90

ಎಲ್‌ಡಿಎಫ್: 49–62

ಎನ್‌ಡಿಎ: 0–3

ಮ್ಯಾಟ್ರಿಜ್

ಯುಡಿಎಫ್: 70–75

ಎಲ್‌ಡಿಎಫ್: 60–65

ಎನ್‌ಡಿಎ: 3-5

ವೋಟ್‌ವೈಬ್

ಎಲ್‌ಡಿಎಫ್: 58-68

ಯುಡಿಎಫ್: 70-80

ಎನ್‌ಡಿಎ: 0-4

ಪೀಪಲ್ಸ್ ಪಲ್ಸ್

ಎಲ್‌ಡಿಎಫ್: 55-65

ಯುಡಿಎಫ್: 75-85

ಎನ್​ಡಿಎ: 0-3

ಪುದುಚೇರಿಯ

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ

ಬಿಜೆಪಿ: 16- 20

ಕಾಂಗ್ರೆಸ್: 6 – 8

ಇತರೆ: 3- 7