Home Uncategorized ಬಂಗಿ ದೊಡ್ಡ ಮಂಜುನಾಥರ ಬೆಂಕಿಯ ಶೀತದೊಂದಿಗೆ ಜ್ಞಾನದ ತಂಪಿನ ಕಾದಂಬರಿಗಳ ಬಿಡುಗಡೆ

ಬಂಗಿ ದೊಡ್ಡ ಮಂಜುನಾಥರ ಬೆಂಕಿಯ ಶೀತದೊಂದಿಗೆ ಜ್ಞಾನದ ತಂಪಿನ ಕಾದಂಬರಿಗಳ ಬಿಡುಗಡೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.29: ಜಿಲ್ಲೆಯ ಕಂಪ್ಲಿ ಪಟ್ಟಣದ  ಹಿರಿಯ ಪತ್ರಕರ್ತ, ಲೇಖಕ  ಬಂಗಿ ದೊಡ್ಡ ಮಂಜುನಾಥ ಅವರು ರಚಿಸಿರುವ ಆರು ಮತ್ತು ಏಳನೇ ಕಾದಂಬರಿಗಳು ಬೆಂಕಿಯ ಶೀತದೊಂದಿಗೆ ಜ್ಞಾನದ ತಂಪು ನೀಡುತ್ತವೆ ಎಂದು ಗಂಗಾವತಿಯ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಅಭಿಪ್ರಾಯಪಟ್ಟಿದ್ದಾರೆ.

ಅವರು ನಿನ್ನೆ ಕಂಪ್ಲಿಯ  ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ಹಮ್ಮಿಕೊಂಡಿದ್ದ ಮಂಜುನಾಥ ಅವರ  ‘ಬೆಂಕಿಯ ಶೀತ

ಮತ್ತು ಶೀತದ ಕಾವು’ ಜೋಡಿ ಕಾದಂಬರಿಗಳ ಬಿಡುಗಡೆ ಸಮಾರಂಭದಲ್ಲಿ ಕಾದಂಬರಿಗಳ ಕುರಿತು ಮಾತನಾಡುತ್ತಿದ್ದರು. ಮನುಷ್ಯ ಜೀವನದ ವಿವಿದ

ಸ್ತರಗಳನ್ನು ಕಾದಂಬರಿ ಕಟ್ಟಿಕೊಡುತ್ತದೆ. ಸ್ವಾತಂತ್ರ್ಯ ಪೂರ್ವ ನಂತರದಲ್ಲೂ ಕಾದಂಬರಿಗಳ ಬೆಳವಣಿಗೆಯ ಚಲನೆ ವಿಶೇಷವಾಗಿತ್ತು. 1881ರಲ್ಲಿ ಮಹಿಳಾ ಪ್ರಧಾನ ಕಾದಂಬರಿ ಇಂದಿರಾಬಾಯಿ ಪ್ರಕಟಗೊಂಡಿತು. ಪಾಶ್ಚತ್ಯ ಪ್ರಭಾವ ಕಾದಂಬರಿ ಲೋಕದ ಮೇಲಾಗಿದೆ. ಆಗ ವ್ಯಕ್ತಿ ಮತ್ತು ಸಮಾಜದ ಸಂಘರ್ಷಗಳು ಕಾದಂಬರಿಯ ವಸ್ತುಗಳಾಗಿದ್ದವು. ಬೆಂಕಿಯ ಶೀತ ಕುತೂಹಲ ಕಾರಿ ಶೈಲಿಹೊಂದಿದೆ. ಭಾಷಿಕ, ವಸ್ತು, ಅಭಿವ್ಯಕ್ತಿ ದೃಷ್ಟಿಕೋನದಿಂದ ಕಟ್ಟಿಕೊಡುತ್ತದೆ. ಬೆಂಕಿಯ ಶೀತದೊಂದಿಗೆ ಜ್ಞಾನದ ತಂಪು ಇದೆ. ಎರಡು ಕೃತಿಗಳು ಮನುಷ್ಯನ ದ್ವೇಷ, ಶೋಷಣೆ, ಮತ್ಸರ ತಾತ್ವಿಕ ಸಂಘರ್ಷ ಕಥಾವಸ್ತುವಾಗಿದೆ. ಹೆಣ್ಣನ್ನು

ಸಹ ಕಾದಂಬರಿಯಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದರು. ಕಸಾಪ   ಜಿಲ್ಲಾಧ್ಯಕ್ಷ  ಡಾ ನಿಷ್ಠಿ ರುದ್ರಪ್ಪರವರು ಬಹಳ ಕಷ್ಟಪಟ್ಟು ಬಳ್ಳಾರಿಯಲ್ಲಿ ಅಖಿಲ ಭಾರತ  ಕನ್ನಡ ಸಾಹಿತ್ಯ ಸಮ್ಮೇಳನ ತಂದಿದ್ದಾರೆ  ಅದು ಬೇಗನೇ ಕೈಗೂಡಲಿ ಎಂದರು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ, ಕೃತಿಗಳ ಶಿರೋನಾಮೆ ಆಸಕ್ತಿದಾಯಕವಾಗಿವೆ. ನಿತ್ಯ ಅನೇಕ

ಕೃತಿಗಳು ಬಿಡುಗಡೆಗೊಳ್ಳುತ್ತವೆ. ಓದುಗರ ಗಮನಸೆಳೆವಂತ ಕೃತಿಗಳು ಮಾತ್ರ ಉಳಿಯುತ್ತವೆ. ಕೆಲವೇ ಕೃತಿಗಳನ್ನು ರಚಿಸಿದ ರಾಜಶೇಖರ ನೀರಮಾನ್ವಿ, ದೇವನೂರು ಮಹಾದೇವರಂತಹವರು ಮನದಲ್ಲಿ ಉಳಿಯುತ್ತಾರೆ. ಕೃತಿಗಳು ಸೃಜನಾತ್ಮಕವಾಗಿ ಓದುಗರ ಮನಸ್ಸು ತಲುಪುವ ಕೃತಿಗಳು ಮುಂದಿನ ಶತಮಾನದಲ್ಲೂ ಬದುಕಿ ಉಳಿಯುತ್ತವೆ ಅಂತಹ ಕೃತಿಗಳಾಗಿವೆ ಈ ಕಾದಂಬರಿಗಳೆಂದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವುದೇ ಎನ್ನುವ ಗೊಂದಲ ಮೂಡಿದೆ. ನಿಷ್ಠಿ ರುದ್ರಪ್ಪರವರು ಸಾಹಿತ್ಯ ಸಮ್ಮೇಳನ ನಡೆಯಲು ಸರ್ವ ಪ್ರಯತ್ನ ನಡೆಸಬೇಕು ಎಂದರು.

ಕಂಪ್ಲಿಯಲ್ಲಿ ನಡೆದ 2003 ಮತ್ತು 2006ರ ಹೋಬಳಿ ಮಟ್ಟದ ಸಮ್ಮೇಳನಗಳು ಗಮನಸೆಳೆದಿದ್ದವು ಎಂದ ಅವರು. ಬೇರೆ ಭಾಷೆಯನ್ನು ವಿರೋಧಿಸಬಾರದು. ನಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತ ಬೇರೆ

ಭಾಷೆಯನ್ನು ಕಲಿಯಬೇಕು. ರಾಜ್ಯದಲ್ಲಿ ಎಲ್ಲಾ ಹಂತದ ಶಿಕ್ಷಣದಲ್ಲೂ ಕನ್ನಡ ಭಾಷೆ ಕಡ್ಡಾಯವಾಗುವಂತ ನಿಯಮ ತರಬೇಕು ಎಂದರು.

ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಜೋಡಿ ಕಾದಂಬರಿಗಳನ್ನು ಬಿಡುಗಡೆಗೊಳಿಸಿದರು.

ಶ್ರೀಪೇಟೆ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಡಿ.ವೀರಪ್ಪ, ನಗರಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣ ಎಸ್.ಪೋಳ್, ಪಿರಮಿಡ್ ಮಾಸ್ಟರ್ ಕೋನೇರು ಶ್ರೀರಾಮಕೃಷ್ಣ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ. ಲೇಖಕ ಬಂಗಿ ದೊಡ್ಡ ಮಂಜುನಾಥ, ಕಸಾಪ ಪದಾಧಿಕಾರಿಗಳಾದ ಅಂಬಿಗರ ಮಂಜುನಾಥ,

ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಹಾದಿಮನಿ ಕಾಳಿಂಗವರ್ಧನ, ಅಶೋಕ ಕುಕನೂರು, ಎಸ್. ಶಾಮಸುಂದರರಾವು. ಯು.ಎಂ.ವಿದ್ಯಾಶಂಕರ, ಬಡಿಗೇರ ಜಿಲಾನ್ಸಾಬ್ ಸೇರಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಶಿಕ್ಷಕ ಜೀರು ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನ ನಡೆಯುತ್ತೆ:

ಕಸಾಪ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಬಳ್ಳಾರಿಯಲ್ಲಿ ಸಮ್ಮೇಳನ ನಡೆಯಬೇಕೆನ್ನುವುದು 69 ವರ್ಷಗಳ ಕನಸಾಗಿದೆ. ಡಿಸ್ಸೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಸಮ್ಮೇಳನವು ಕೋರ್ಟ್ ಕಚೇರಿ ನೆಪದಲ್ಲಿ ಕಾಲ ವಿಳಂಭವಾಗುತ್ತಿದೆ. ಸಮ್ಮೇಳನ ನಡೆಸಲು ನಿರಂತರ ಪ್ರಯತ್ನ ಸಾಗಿದೆ ಎಂದರು.