Home ಜಿಲ್ಲೆ ಧರ್ಮದ ಬಗ್ಗೆ ಮಾತನಾಡುವಾಗ ಆಳವಾದ ಅಧ್ಯಯನ ಬೇಕು: ನಿರ್ಭಯಾನಂದ ಸರಸ್ವತಿ

ಧರ್ಮದ ಬಗ್ಗೆ ಮಾತನಾಡುವಾಗ ಆಳವಾದ ಅಧ್ಯಯನ ಬೇಕು: ನಿರ್ಭಯಾನಂದ ಸರಸ್ವತಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಜು.08; ಯಾರೇ ಆಗಲಿ, ಯಾವುದೇ ಧರ್ಮದ ಬಗ್ಗೆ ಮಾತನಾಡುವಾಗ ಆಳವಾದ ಅಧ್ಯಯನ ಇರಬೇಕು. ವಿನಾಕಾರಣನಿರ್ದಿಷ್ಟ ಧರ್ಮವನ್ನು ಟೀಕಿಸುವುದು ಸರಿಯಲ್ಲ. ಧರ್ಮದ ನಿಜವಾದ ತತ್ವ, ಮೌಲ್ಯಗಳುಹಾಗೂ ವಿಶ್ವಮಾನವೀಯ ಸಂದೇಶವನ್ನು ಅರ್ಥಮಾಡಿಕೊಂಡ ಬಳಿಕವೇ ಅದರ ಕುರಿತು ಅಭಿಪ್ರಾಯವ್ಯಕ್ತಪಡಿಸಬೇಕೇ ವಿನಾ, ಬಾಯಿಗೆ ಬಂದಂತೆ ಮಾತನಾಡುವುದರಿಂದ ಯಾವ ಪ್ರಯೋಜನವೂಆಗುವುದಿಲ್ಲವೆಂದು ಗದಗ-ವಿಜಯಪುರ ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಅಭಿಪ್ರಾಯಪಟ್ಟರು

ಅವರು ನಗರದ ಪಾಂಚಜನ್ಯ ಸಭಾಂಗಣದಲ್ಲಿ ಜರುಗಿದ ವಿವೇಕಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಸ್ವಾಮಿ ವಿವೇಕಾನಂದರ ಲೀಲಾಮೃತ ಹಾಗೂ ಸನಾತನಧರ್ಮದ ಮಹತ್ವ ಕುರಿತು ಮಾತನಾಡುತ್ತಿದ್ದರು.

ಮನುಷ್ಯನ ಜೀವನವನ್ನು ಸುಖ, ಶಾಂತಿ ಹಾಗೂ ಸೌಹಾರ್ದದಿಂದ ಕೂಡಿಸುವ ತತ್ವವೇ ಸನಾತನಹಿಂದೂ ಧರ್ಮದ ಮುಖ್ಯ ಉದ್ದೇಶವಾಗಿದ್ದು ಈ ಬಗ್ಗೆ ಸಮಗ್ರ ಅರಿವಿಲ್ಲದೆ ಟೀಕೆಮಾಡುವವರನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಅಂತಹವರ ಮಾತುಗಳಿಗೆ ಹೆಚ್ಚುಮಹತ್ವವೂ ಇರುವುದಿಲ್ಲ.

ಸನಾತನ ಧರ್ಮವನ್ನು ಟೀಕಿಸುವವರಿಗೆ ಕಿಂಚಿತ್ತೂ ಧರ್ಮದ ಬಗ್ಗೆ ಜ್ಞಾನಇರುವುದಿಲ್ಲ. ಹೀಗಾಗಿಯೇ ಅವರು ತಮಗೆ ತೋಚಿದಂತೆ ಮಾತನಾಡುತ್ತಾರೆಂದರು.

ಡಾ.ರವಿರೆಡ್ಡಿ ಹಾಗೂ ನಿವೃತ್ತ ಉಪನ್ಯಾಸಕ ಮಂಜುನಾಥ ಉಪಸ್ಥಿತರಿದ್ದರು. ಹಿಂದೂಸ್ತಾನಿ ಗಾಯಕ ಬೆಳಗಲ್ಲು ಹನುಮಂತು ಹಾಗೂ ಬೆಳಗಲ್ಲು ರೇಖಾಅವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ತಿಪ್ಪೇಸ್ವಾಮಿ ಮುದ್ದಟನೂರುಹಾರ್ಮೋನಿಯಂ, ಎಂ.ವೀರೇಶ್ ಕುರುಗೋಡು ತಬಲಾ ಸಾಥ್ ನೀಡಿದರು.ಪ್ರಭುದೇವ ಕಪ್ಪಗಲ್ಲು ಹಾಗೂ ಅಡವಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.