Home ಜಿಲ್ಲೆ ಕಳ್ಳತನವಾಗಿದ್ದ 13 ಬೈಕ್ ಪತ್ತೆ ಓರ್ವನ ಬಂಧನ

ಕಳ್ಳತನವಾಗಿದ್ದ 13 ಬೈಕ್ ಪತ್ತೆ ಓರ್ವನ ಬಂಧನ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಮೇ.1: ಬೈಕ್ ಕಳ್ಳತನ ಪ್ರಕರಣದಲ್ಲಿ ಗಾಂಧಿನಗರ ಠಾಣೆಯ ಪೊಲೀಸರು ಓರ್ವನನ್ನು ಬಂಧಿಸಿ, 13 ಬೈಕ್ ವಶಪಡಿಸಿಕೊಂಡಿದ್ದಾರೆ.

ಬೈಕ್ ಕದಿಯುತ್ತಿದ್ದ ಆಂದ್ರಪ್ರದೇಶದ ಹಾಕರ್ವಿ ಬಳಿಯ ಮಾಚನೂರಿನ ಆರೋಪಿ ವಲಸೆ ರಾಜನನ್ನು

ಬಂಧಿಸಿಸಲಾಗಿದೆ.

ಆರೋಪಿಯು ಗಾಂಧಿನಗರ, ಬ್ರೂಸ್ ಪೇಟೆ ಪೊಲೀಸ್ ಠಾಣೆ ಸೇರಿದಂತೆ ಇತರೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ.