
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ಇಲ್ಲಿನ ವೀರಶೈವ ವಿದ್ಯಾ ವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ವುಂಕಿ ಮರಿಸಿದ್ಧಮ್ಮ ಶಾಲೆ ಮತ್ತು ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗೊರುವ ಎಲ್.ಟಿ.ಶೇಖರ್ ಅವರನ್ನು ಸಮಾಜ ಸೇವೆ ಪರಿಗಣಿಸಿ ಬಳ್ಳಾರಿ ಜಿಲ್ಲೆ ಯಿಂದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಈ ವರ್ಷದ ರಾಜ್ಯ ಮಟ್ಟದ “ಕಾಯಕ ಯೋಗಿ” ಪ್ರಶಸ್ತಿಗೆ ಆಯ್ಕೆ ಮಾಡಿದೆ
ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದ ಪ್ರತಿ ಜಿಲ್ಲೆಯಿಂದ ತಲಾ ಓರ್ವ ಸಾಧಕರನ್ನು ಆಯ್ಕೆಮಾಡಲಾಗಿದ್ದು ಬಳ್ಳಾರಿ ಜಿಲ್ಲೆಯಿಂದ ಎಲ್.ಟಿ.ಶೇಖರ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದ್ದಾರೆ. ಮೇ 1 ಕಾರ್ಮಿಕರ ದಿನಾಚರಣೆ ಪಯುಕ್ತ ಪ್ರಶಸ್ತಿಯನ್ನು ಹೊಸಕೋಟೆ ತಾಲೂಕು ಸೂಲಿಬೆಲೆಯಲ್ಲಿ ಪ್ರಧಾನ ಮಾಡಲಿದೆ.
ಆಹಾರ ಸಚಿವ ಕೆ.ಎಸ್. ಮುನಿಯಪ್ಪ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇವರು ಪ್ರಶಸ್ತಿ ನೀಡಿ ಗೌರವಿಸಲಿದೆಂದು ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಆರ್.ಹೆಚ್.ಯಂ.ಚನ್ನಬಸವಸ್ವಾಮಿ ತಿಳಿಸಿದ್ದಾರೆ.

























