
ಸಂಜೆವಾಣಿ ವಾರ್ತೆ
ಹೊಸಪೇಟೆ.ಮೇ,14- ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟುಗಳಿಗೆ ಹೊಸ ಚೈನ್ ಅಳವಡಿಕೆ ಕಾರ್ಯ ಇಂದಿನಿಂದ ಆರಂಭವಾಗಲಿದೆ.
ತುಂಗಭದ್ರಾ ಜಲಾಶಯಕ್ಕೆ ಈಗಾಗಲೇ 33 ಹೊಸ ಕ್ರಸ್ಟ್ ಗೇಟುಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು. ಚೈನ್ ಅಳವಡಿಕೆ ಕಾರ್ಯ ಮಾತ್ರ ಬಾಕಿ ಇತ್ತು. ಹೊಸ ಚೈನ್ ಈಗಾಗಲೇ ಚೆನ್ನೈಯಿಂದ ಬುಧವಾರ ತುಂಗಭದ್ರಾ ಜಲಾಶಯದ ಆವರಣ ತಲುಪಿದ್ದು. ಇಂದಿನಿಂದ ಕ್ರಸ್ಟ್ ಗೇಟುಗಳಿಗೆ ಪ್ರಾಯೋಗಿಕವಾಗಿ ಹೊಸ ಚೈನ್ ಅಳವಡಿಕೆ ಕಾರ್ಯ ಆರಂಭಿಸುವುದಾಗಿ ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಮೇ ಅಂತ್ಯದೊಳಗೆ ಪೂರ್ಣ: ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟುಗಳಿಗೆ ಚೈನ್ ಅಳವಡಿಸುವ ಕಾರ್ಯವನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಲು ತುಂಗಭದ್ರಾ ಮಂಡಳಿ ತೀಮಾನಿಸಿದೆ. ಗೇಟ್ ಸಂಖ್ಯೆ 33 ರಿಂದ ಚೈನ್ ಅಳವಡಿಕೆ ಕಾರ್ಯ ಆರಂಭಗೊಳ್ಳಲಿದೆ. ಒಂದು ಗೇಟ್ ಗೆ ಚೈನ್ ಅಳವಡಿಸಲು 2 ರಿಂದ 3 ದಿನ ಬೇಕಾಗುತ್ತದೆ ಎನ್ನಲಾಗಿದೆ. ಚೈನ್ ಅಳವಡಿಕೆಗೆ ಈಗಾಗಲೇ ವಿಶೇಷ ತಜ್ಙರ ತಂಡ ರಚಿಸಲಾಗಿದೆ.
ಆತಂಕ ದೂರ: ಕಳೆದ ವರ್ಷ ಜಲಾಶಯದ 19ನೇ ನಂಬರಿನ ಗೇಟಿನ ಚೈನ್ ಲಿಂಕ್ ಕಟ್ ಆಗಿ ಕ್ರಸ್ಟ್ ಗೇಟು ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿತ್ತು. ಇದರಿಂದ ಅಪಾರ ಪ್ರಮಾಣದ ನೀರು ಹೊರ ಹೋಗಿ ರೈತರಲ್ಲಿ ಆತಂಕ ಮನೆ ಮಾಡಿತ್ತು. ತುರ್ತಾಗಿ ಸ್ಟಾಪ್ ಲಾಕ್ ಅಳವಡಿಸಿ, ನೀರು ಜಲಾಶಯದಿಂದ ಹೊರ ಹೋಗದಂತೆ ತಡೆದು ರೈತರ ಬೆಳೆಗಳಿಗೆ ನೀರು ನೀಡಲಾಗಿತ್ತು. ನಂತರ ತಜ್ಙರ ಸಲಹೆಯಂತೆ ತುಂಗಭದ್ರಾ ಮಂಡಳಿ ಜಲಾಶಯದ ಎಲ್ಲಾ ಕ್ರಸ್ಟ್ ಗೇಟುಗಳ ಬದಲಾವಣೆಗೆ ಮುಂದಾಗಿ, 33 ಹೊಸ ಕ್ರಸ್ಟ್ ಗೇಟುಗಳನ್ನು ಯಶಸ್ವಿಯಾಗಿ ಆಳವಡಿಸುವ ಮೂಲಕ ರೈತರ ಆತಂಕ ದೂರ ಮಾಡಿತ್ತು. ಸಣ್ಣ ಪುಟ್ಟ ವೆಲ್ಡಿಂಗ್ ಕೆಲಸಗಳಿದ್ದು. ಅವುಗಳನ್ನು ಮೇ.15 ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಿ ಅದರಂತೆ ಕೆಲಸ ಆರಂಭಿsÀಸಿತ್ತು. ಆದರೆ ಹೊಸ ಚೈನ್ ಅಳವಡಿಕೆ ಮಾತ್ರ ಬಾಕಿ ಇತ್ತು. ಅದರಂತೆ ಮೊದಲ ಹಂತವಾಗಿ 5 ಹೊಸ ಚೈನ್ ಗಳು ಜಲಾಶಯದ ಆವರಣ ತಲುಪಿದ್ದು. ಇಂದಿನಿಂದ ಪ್ರಾಯೋಗಿಕ ಅಳವಡಿಕೆ ಕಾರ್ಯ ಆರಂಭಗೊಳ್ಳಲಿದೆ.
5.8 ಕೋಟಿ ವೆಚ್ಚ: ಒಟ್ಟು 5,8 ಕೋಟಿ ರೂ ವೆಚ್ಚದಲ್ಲಿ 33 ಗೇಟುಗಳಿಗೆ ಹೊಸ ಚೈನ್ ಅಳವಡಿಸಲಾಗುತ್ತಿದೆ. ಅದಕ್ಕಾಗಿ 66 ಚೈನ್ ಗಳನ್ನು ಚೆನ್ನೈನಲ್ಲಿ ತಯಾರಿಸಲಾಗಿದೆ. ಪ್ರತಿ ಒಂದು ಚೈನ್ 1.9 ಟನ್ ತೂಕ ಹೊಂದಿದ್ದು. ಒಟ್ಟು 33 ಗೇಟುಗಳಿಗೆ ತಲಾ ಎರಡರಂತೆ 66 ಚೈನ್ ಗಳನ್ನು ಅಳವಡಿಸಲಾಗುತ್ತಿದೆ.
ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟುಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂದಿದೆ. ಈಗಾಗಲೇ 5 ಹೊಸ ಚೈನುಗಳು ಜಲಾಶಯದ ಆವರಣ ತಲುಪಿದ್ದು. ಇಂದಿನಿಂದ ಹೊಸ ಚೈನ್ ಗಳ ಪ್ರಾಯೋಗಿಕ ಅಳವಡಿಕೆ ಕಾರ್ಯ ಆರಂಭಿಸಿ, ಮೇ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಒ.ಆರ್.ಕೆ. ರೆಡ್ಡಿ
ಕಾರ್ಯದರ್ಶಿ
ತುಂಗಾಭದ್ರಾ ಮಂಡಳಿ.























