Home ಜಿಲ್ಲೆ ಕಲಬುರಗಿ ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದಅಮೂಲ್ಯ ಕೊಡುಗೆ: ಶಶೀಲ್ ನಮೋಶಿ

ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದಅಮೂಲ್ಯ ಕೊಡುಗೆ: ಶಶೀಲ್ ನಮೋಶಿ

ಕಲಬುರಗಿ,ಜೂ 21:ಯೋಗವು ಪ್ರಾಚೀನ ಭಾರತೀಯ ಸಂಪ್ರದಾಯದ ಒಂದು ಅಮೂಲ್ಯ ಕೊಡುಗೆಯಾಗಿದ್ದು, ಇದು ದೇಹ,ಮನಸ್ಸು ಮತ್ತು ಪ್ರಕೃತಿಯ ನಡುವೆ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಹೈಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಹೇಳಿದರು.
ಅವರು ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ಮಹಾವಿದ್ಯಾಲಯದಲ್ಲಿ ನಡೆದಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ,ಕೇಂದ್ರ ಸಂವಹನ ಇಲಾಖೆ (ವಾರ್ತಾ ಮತ್ತು ಪ್ರಸಾರ ಸಚಿವಾಲಯ),ಮಹಿಳಾ ಪತಂಜಲಿ ಯೋಗ ಸಮಿತಿ, ಭಾರತ ಸೆವಾದಳ ಜಿಲ್ಲಾ ಸಮಿತಿ ಸಹಯೋಗದಲ್ಲ ನಡೆದ 12 ನೇಯ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಯೋಗವು ಕೇವಲದೈಹಿಕ ವ್ಯಾಯಾಮವಲ್ಲ, ಬದಲಿಗೆ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಸಾಧಿಸುವ ಒಂದು ಜೀವನ ಪದ್ಧತಿಯಾಗಿದೆ ಎಂದು ಹೇಳಿದರು.
ಈ ಪ್ರಾಚೀನ ಭಾರತೀಯ ಸಂಪ್ರದಾಯವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ನಮ್ಮ ಹೆಮ್ಮೆಯ ಪ್ರಧಾನಿ
ನರೇಂದ್ರ ಮೋದಿ ವಿಶ್ವ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದಾಗ ವಿಶ್ವಸಂಸ್ಥೆಯು 2014 ರಲ್ಲಿ ವಿಶ್ವ ಯೋಗ ದಿನಾಚರಣೆ
ಘೋಷಣೆ ಮಾಡಿತು.ಮೊದಲ ಬಾರಿಗೆ 2015ರ ಜೂನ್ 21 ರಂದು ವಿಶ್ವದಾದ್ಯಂತ ಆಚರಿಸಲುಪ್ರಾರಂಭವಾಯಿತು.
ಜೂನ್ 21 ರಂದೆ ಯೋಗ ದಿನಾಚರಣೆ ಮಾಡಲು ಕಾರಣವೇನೆಂದರೆಜೂನ್ 21 ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾಗಿದ್ದು (ಸಮ್ಮರ್ ಸಾಲ್ಸ್ಟೈಸ್), ದೀರ್ಘಾಯುಷ್ಯ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಸಂಕೇತಿಸುತ್ತದೆ.ವರ್ಷದ (2026) ವಿಶ್ವ ಯೋಗ ದಿನದ ಧ್ಯೇಯವಾಕ್ಯವು ಆರೋಗ್ಯಕರ ವೃದ್ಧಿಗಾಗಿ ಯೋಗಆಗಿದ್ದು ಇಂದಿನಕಲುಷಿತ ವಾತಾವರಣದಲ್ಲಿ ಪ್ರತಿಯೊಬ್ಬರು ತಮ್ಮ ಆರೋಗ್ಯ ರಕ್ಷಣೆಗಾಗಿ ಯೋಗ ಮುಖ್ಯವಾಗಿದೆ ಎಂದುಹೇಳಿದರು, ಕೇವಲ ಇಂದು ಒಂದು ದಿನ ಯೋಗ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪೆÇೀಟೋ ಹಾಕಿಕೊಂಡುಪ್ರದರ್ಶನಕ್ಕಾಗಿ ಅಲ್ಲ ಎಂದು ಹೇಳಿದರು.
ಆಸನಗಳು ಮತ್ತು ಪ್ರಾಣಾಯಾಮಗಳು ದೇಹದ ನಮ್ಯತೆಯನ್ನು ಹೆಚ್ಚಿಸುತ್ತವೆ, ರಕ್ತಸಂಚಾರವನ್ನು ಸುಧಾರಿಸುತ್ತವೆ
ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ ಧ್ಯಾನ ಮತ್ತು ಉಸಿರಾಟದ ನಿಯಂತ್ರಣವು ಒತ್ತಡ, ಆತಂಕ ಮತ್ತು
ಖಿನ್ನತೆಯನ್ನು ಕಡಿಮೆ ಮಾಡಿ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಯೋಗಾಭ್ಯಾಸವು ದೇಹದ ಆಂತರಿಕ ಅಂಗಗಳು
ಮತ್ತು ಗ್ರಂಥಿಗಳನ್ನು ಉತ್ತೇಜಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೈನಂದಿನ ಯೋಗಾಭ್ಯಾಸವು
ಮನಸ್ಸನ್ನು ಶಾಂತಗೊಳಿಸಿ, ಉತ್ತಮ ನಿದ್ರೆಗೆ ಸಹಕಾರಿಯಾಗುತ್ತದೆ ಎಂದು ವೈದ್ಯಕೀಯ ವರದಿಯೇ ದೃಢಪಡಿಸಿದೆ
ಎಂದು ಹೇಳಿದರು
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು
ದಂತ ವೈದ್ಯಕಿಯ ಮಹಾವಿದ್ಯಾಲಯದ ಸಂಚಾಲಕ ಡಾ ಅನಿಲಕುಮಾರ ಪಟ್ಟಣ, ಸಂಸ್ಥೆಯ
ಆಡಳಿತಾಧಿಕಾರಿ ಕಾಲೇಜಿನ ಪ್ರಾಚಾರ್ಯರಾದ ಡಾ ಜಯಶ್ರೀ ಮುದ್ದಾ, ಉಪ ಪ್ರಾಚಾರ್ಯ ಡಾ
ವೀರೆಂದ್ರ ಪಾಟೀಲ, ಸಂಸ್ಥೆಯ ಕ್ವಾಲಿಟಿ ಅಶೂರೆನ್ಸ ಶೆಲ್ ಮುಖ್ಯಸ್ಥೆ ಡಾ ಉಮಾ ರೇವೂರ, ಪತಂಜಲಿ ಯೋಗ
ಸಮಿತಿಯ ಮಹಿಳಾ ವಿಭಾಗದ ಸುಮಂಗಲಾ, ಅನಿತಾ, ವೀರೆಶ, ಭಾರತೀಯ ಸೇವಾದಳದ ಜಿಲ್ಲಾ ಸಂಘಟಕ
ಚಂದ್ರಶೇಖರ್ ಜಮಾದಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು ಡಾ ಸುರಭಿ ರಾಯರಾಮ ಕಾರ್ಯಕ್ರಮ
ನಿರೂಪಿಸಿದರು.ಯೋಗ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು , ಪ್ರಾಚಾರ್ಯರು ಉಪನ್ಯಾಸಕರು ಭಾಗವಹಿಸಿದ್ದರು.