
ಬೀದರಃ ಏ.೨೮:ಬೀದರ ನಗರದ ಡಾ, ಬಿ ಆರ್ ಅಂಬೇಡ್ಕರ ವೃತ್ತದ ಹತ್ತಿರ ಇರುವ ಕರ್ನಾಟಕ ಸಾಂಸ್ಕೃತಿಕ ಸಭಾಂಗಣದಲ್ಲಿ ಮೇ ೧ ರಂದು ಬೆಳಗ್ಗೆ ೧೦-೩೦ ಗಂಟೆಯಿAದ ಕರುನಾಡು ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಗಿಲಾವ ಕಾರ್ಮಿಕರ ಸಂಘ ಬೀದರ ವತಿಯಿಂದ ನಡೆಯಲಿರುವ ವಿಶ್ವ ಕಾರ್ಮಿಕರ ದಿನಾಚರಣೆ ಹಾಗೂ ಹಿರಿಯ ಕಾರ್ಮಿಕರಿಗೆ ಈ ವರ್ಷ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಆಗ್ರಶ್ರೇಣಿಯಲ್ಲಿ ಪಾಸಾಗಿರುವ ಕಾರ್ಮಿಕರ ಮಕ್ಕಳಿಗೆ ಗೌರವ ಸನ್ಮಾನ ಹಾಗೂ ಕಾರ್ಮಿಕರ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಇಂದು ೨೭-೪-೨೦೨೬ ರಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ವೃತ್ತದಲ್ಲಿ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಿಲಾಯಿತು. ಕಾಯಕವೇ ಕೈಲಾಸವೆಂದು ದುಡಿಮೆಯಲ್ಲಿ ಜೀವನ ನಡೆಸುವ ಕಾರ್ಮಿಕರ ಜೀವನಕ್ಕೆ ಎಂಟು ಗಂಟೆ ದುಡಿಮೆ ದುಡಿಮೆಗೆ ತಕ್ಕವೇತನ ವಾರದ ರಜೆ ಹಾಗೂ ಸರ್ಕಾರದಿಂದ ವಿವಿಧ ಯೋಜನೆಗಳು, ಜಾರಿಗೆ ಇರುವುದರಿಂದ ಕಾರ್ಮಿಕ ಮಕ್ಕಳು ಉನ್ನತ ಶಿಕ್ಷಣ ಮತ್ತು ಉನ್ನತ ಹುದ್ದೆಯನ್ನು ಪಡೆದುಕೊಳ್ಳುತ್ತಿದ್ದಾರೆ. ವಯೋವೃದ್ಧ ಕಾರ್ಮಿಕರಿಗೆ ಪಿಂಚಣಿ ಹಾಗೂ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ಸಹಾಯಧನ ಸರ್ಕಾರ ನೀಡುತ್ತಿದೆ. ಕಾರ್ಮಿಕರು ತಮ್ಮ ಸಭೆ ಸಮಾರಂಗಳನ್ನು ಮಾಡಿಕೊಳ್ಳಬೇಕ್ಕಾದರೆ ಜಿಲ್ಲೆಗೊಂದು ಜಿಲ್ಲೆಯ ಎಲ್ಲಾ ತಾಲ್ಲೂಕಿಗೊಂಡು ಕಾರ್ಮಿಕರ ಸಾಂಸ್ಕೃತಿಕ ಭವನ ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ಕಾರ್ಮಿರ ಕಲ್ಯಾಣ ಮಂಟಪಗಳನ್ನು ನಿರ್ಮಾಣ ಮಾಡಲು ಕಾರ್ಮಿಕ ಸಂಘದ ಮೂಲಕ ಕಾರ್ಯಕ್ರಮವನ್ನು ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮೇಲೆ ಒತ್ತಡವನ್ನು ಹಾಕಿ ಕಾರ್ಮಿಕರ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಿಕೊಳ್ಳಬೇಕ್ಕಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ನಮ್ಮ ಕಾರ್ಮಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರಮದಲ್ಲಿ ಭಾಗವಹಿಸಲು ಪತ್ರಿಕಾ ಪ್ರಕಟಣೆ ಮೂಲಕ ಕರುನಾಡು ಕಟ್ಟಡ ಇತರ ನಿರ್ಮಾಣ ಕಾರ್ಮಿಕರ ಹಾಗೂ ಗಿಲಾವ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷನಾದ ನಾನು ಶ್ರೀ ಸಂಜುಕುಮಾರ ಸಿಂಧೆ ಪದಾಧಿಕಾರಿಗಳಾದ ರವಿ ಗುತ್ತೇದಾರ ನರಸಿಂಗ ಅಮಲಾಪೂರು, ಸಾಹಿತಿಗಳಾದ ಡಾ. ಸುಬ್ಬಣ್ಣ ಕರಕನಳ್ಳಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ( ದಿ. ಲಕ್ಷಿö??Ã ನಾರಾಯಣ ನಾಗವಾರ ಸ್ಥಾಪಿತ) ಕಲಬುರ್ಗಿ ವಿಭಾಗೀಯ ಸಂಚಾಲಕ ಉಮೇಶಕುಮಾರ ಸೋರಳ್ಳಿಕರ್, ಕಾರ್ಮಿಕ ಮುಖಂಡರಾದ ಶರಣಪ್ಪ, ಶಿವಕುಮಾರ್ ಯಾದ್ಲಾಪುರ, ಸಂಜು, ಸುನೀಲ್ ಕುಮಾರ್, ಬಂದಗೆ ಪಂಡಾರಿನಾಥ್, ತುಕಾರಾಮ್ ಮಿರ್ಜಾಪುರ (ಕೆ ) ತುಕಾರಾಮ್ ಬಸತಪುರ, ಯವನ್, ಲಕ್ಷುಮಣ ಶಹಾಪುರ ಗೆಟ್, ನರಸಿಂಗ್ ಚಿದ್ರಿ ಅಶೋಕ್ ವಿದ್ಯಾನಗರ, ನಿವೃತ ಪೊಲೀಸ್ ಅಧಿಕಾರಿ ಬಸವರಾಜ ಮೀಠಾರೆ ಮುಂತಾದವರು ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು























