
ಕಲಬುರಗಿ,ಜು.2-ನಗರದ ಜಿಮ್ಸ್ ಆಸ್ಪತ್ರೆ ಸುತ್ತಲ್ಲಿನ ಅವರಣದಲ್ಲಿ ವಿಶ್ವ ವೈದ್ಯರ ದಿನಾಚರಣೆಯ ಹಾಗೂ ವಯೋ ನಿವೃತ್ತಿ ಹೊಂದಿದ ನೆನಪಿನಗೋಸ್ಕರ ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಕುಮಾರ್ ಸಿ.ಆರ್. ಮತ್ತು ಯಾದಗಿರಿಯ ಯೀಮ್ಸ್ ನಿರ್ದೇಶಕರಾದ ಡಾ.ಸಂದೀಪ್ ಹರಾಸಣಗಿ ಅವರ ಸಮ್ಮುಖದಲ್ಲಿ ಸಸಿ ನೆಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೀರಣ್ಣ ಶಿವಪುರ, ರಾಚಣ್ಣ ಬಿಸ್ಗೊಂಡ, ಸುರೇಶ್, ಶಿವಾನಂದ, ರಾಮಲಿಂಗ, ಬಸವರಾಜ, ಶಂಕರಲಿಂಗ ಪಾಟೀಲ ,ಕಾವೇರಿ ಹಾಗೂ ಇತರರು ಹಾಜರಿದ್ದರು.
ಪ್ರತಿ ಸಂದರ್ಭದಲ್ಲೂ ಪರಿಸರ ಸಂರಕ್ಷಣೆಗಾಗಿ ಆಸ್ಪತ್ರೆಯ ಆವರಣದಲ್ಲಿ ಹಸಿರು ಬೆಳೆಸಲು, ಉಳಿಸಲು ಶ್ರಮವಹಿಸಲಾಗುತ್ತಿದೆ. ಆಸ್ಪತ್ರೆಯ ಆವರಣ “ಪ್ಯೂರ್ ಆಕ್ಸಿಜನ್ ಜೋನ್” ಮಾಡಲಾಗುತ್ತಿದೆ. ಆಸ್ಪತ್ರೆ ಆವರಣದಲ್ಲಿ ವಾಯು ವಿಹಾರಕ್ಕೆ ಸಾರ್ವಜನಿಕರು ಬರುತ್ತಿದ್ದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
























