
ಬೀದರ:ಏ.29: ನಗರದ ನೇಹರು ಸ್ಟೇಡಿಯಂ ಹತ್ತೀರ ವಿರುವ ಗುರು ನಾನಕ ಪಬ್ಲಿಕ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕು. ಇಂದಿರಾ ಖೂಬಾ ಅವರು “ಡಿ ಬೌಂಡ್ ಬೈ ಎ ಸೈಲೆಂಟ್ ಥ್ರೆಡ್” ಸಮ್ ಲೈವ್ಸ್ ಆರ್ ನೆವರ್ ಮೀಟ್ ಟು ಬಿ ಸೆಪರೇಟೆಡ್ ಎಂಬ ಪುಸ್ತಕವನ್ನು ಬರೆದು ಗಮನ ಸೆಳೆದಿದ್ದಾರೆ.
ಈ ಗಮನಾರ್ಹ ಕೃತಿಯು ನಿಗೂಢತೆ, ಗುಪ್ತ ಸತ್ಯಗಳು ಮತ್ತು ಆಳವಾದ ಭಾವನಾತ್ಮಕ ಉದ್ದೇಗದಿಂದ ಹೆಣೆಯಲ್ಪಟ್ಟ ಮಾನಸಿಕ ಫ್ಯಾಂಟಸಿ ಥ್ರೀಲರ್ ಆಗಿದೆ. ಪುಸ್ತಕವು ಈಗ ಅಮೆಜಾನ್‍ನಲ್ಲಿ ಲಭ್ಯವಿದೆ.
ಈ ಅತ್ಯುತ್ತಮ ಸಾಹಿತಿ ಸಾಧನೆಗೆ ಸಂಸ್ಥೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ ಮತ್ತು ಅವರ ಭವಿಷ್ಯದ ಎಲ್ಲಾ ಪ್ರಯತ್ನಗಳಲ್ಲಿ ಅವರಿಗೆ ಉತ್ತಮ ಯಶಸ್ಸನ್ನು ಸಿಗಲಿ ಎಂದು ಹಾರೈಸಿದ್ದಾರೆ.
ಸಾಧನೆಗೈದ ವಿದ್ಯಾರ್ಥಿನಿ ಕು. ಇಂದಿರಾ ಖೂಬಾ ಅವಳನ್ನು ಶಾಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಇಂದಿರಾ ಅವರ ಪೋಷಕರು, ಡೀನರಾದ ಬಿ. ಹನುಮಾನ, ಪ್ರಾಂಶುಪಾಲೆ ನಲಿನಿ ಡಿ.ಜಿ. ಮತ್ತು ಅಮಜದ ಅಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಇಂದಿರಾ ಖೂಬಾ ಮಾತನಾಡಿ ಗುರು ನಾನಕ ಶಾಲೆಯ ವಾತಾವರಣ ಚೆನ್ನಾಗಿದೆ. ಇಲ್ಲಿ ಶಿಕ್ಷಕರು ಬಹಳ ಸಹಕಾರಿ ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾರೆ ಎಂದು ಈ ಸಂದರ್ಭದಲ್ಲ ಮೆಚ್ಚುಗೆ ವ್ಯಕ್ತಪಡಿಸಿದರು.






















