
ಲಕ್ಷೆ÷್ಮÃಶ್ವರ,ಮಾ.೧೨: ತಾಲೂಕಿನಾದ್ಯಂತ ಸನ್ ೨೦೨೫_ ೨೬ ನೇ ಸಾಲಿನಲ್ಲಿ ರಸ್ತೆ ಬದಿ ಸಸಿಗಳನ್ನು ನೆಟ್ಟು ನೆಡುತೋಪು ಕೈಗೊಳ್ಳಲಾಗಿದೆ.
ಈಗ ಬೇಸಿಗೆ ಆರಂಭವಾಗಿರುವುದರಿAದ ನೆಟ್ಟಿರುವ ಸಸಿಗಳಿಗೆ ನೀರುಣಿಸುವ ಕಾರ್ಯವನ್ನು ಸಾಮಾಜಿಕ ಅರಣ್ಯ ಇಲಾಖೆ ಕೈಗೊಂಡಿದೆ.
ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತಾಲೂಕಿನಾದ್ಯಂತ ೬೩೦೦ ಸಸಿಗಳನ್ನು ನಾಟಿ ಮಾಡಲಾಗಿದ್ದು ಈಗ ಈ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ಸಸಿಗಳನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ.
ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ರಾಮಪ್ಪ ಕಂಬಳಿಯವರು ಮಾಹಿತಿ ನೀಡಿ ತಾಲೂಕಿನ ಅತ್ಯಂತ ೬೩೦೦ ಸಸಿಗಳನ್ನು ನಾಟಿ ಮಾಡಲಾಗಿದ್ದು ಬೇಸಿಗೆಕಾಲ ಆರಂಭವಾಗಿರುವುದರಿAದ ಮೂರು ತಿಂಗಳು ಕಾಲ ಈ ಸಸಿಗಳಿಗೆ ನೀರುಣಿಸುವ ಕಾರ್ಯವನ್ನು ಇಲಾಖೆ ಕೈಗೊಂಡಿದೆ ಎಂದು ಹೇಳಿದರು.
ತಾಲೂಕಿನ ಯಳವತ್ತಿ ಚಿಂಚಲಿ ಮಾಗಡಿ ಅಕ್ಕಿ ಗುಂದ ಬಟ್ಟೂರು ಅಡರಕಟ್ಟಿ ಪುಟ್ಟಗಾಂವ ಬಡ್ನಿ ರಸ್ತೆ ಬದಿ ಸಸಿಗಳನ್ನು ಹಚ್ಚ ಲಾಗಿದ್ದು ಈಗ ಅವುಗಳನ್ನು ಸಂರಕ್ಷಿಸಲಾಗುತ್ತದೆ ಎಂದು ಹೇಳಿದರು.
ಮನವಿ ಃ ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಕಸ ಕಡ್ಡಿಗಳಿಗೆ ಬೆಂಕಿ ಹಚ್ಚುತ್ತಿದ್ದು ಇದರಿಂದ ರಸ್ತೆ ಬದಿಗಳಲ್ಲಿನ ಸಸಿಗಳಿಗೆ ಧಕ್ಕೆಯಾಗುತ್ತಿದೆ ಆದ್ದರಿಂದ ಸಾರ್ವಜನಿಕರು ರೈತರು ಸಸಿಗಳಿಗೆ ಧಕ್ಕೆಯಾಗದಂತೆ ಮುಂಜಾಗತ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.






















