
ಶಿರಹಟ್ಟಿ/ ಲಕ್ಷೆ÷್ಮÃಶ್ವರ,ಮಾ.೧೦: ಬೇಸಿಗೆ ಬಂತೆAದರೆ ಅರಣ್ಯ ಇಲಾಖೆಯವರಿಗೆ ಕಾಡಿನ ಬೆಂಕಿ ನಿಯಂತ್ರಿಸುವುದು ಕಾಡು ಪ್ರಾಣಿಗಳಿಗೆ ನೀರು ಸಿಗುವಂತೆ ಮಾಡುವುದು ಕಾಡು ಪ್ರಾಣಿಗಳು ನೀರು ಆಹಾರ ಅರಶಿ ನಾಡಿಗೆ ಬರದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಇಲಾಖೆಯದ್ದಾಗಿದೆ.
ಈ ನಿಟ್ಟಿನಲ್ಲಿ ಶಿರಹಟ್ಟಿ ತಾಲೂಕಿನ ಅರಣ್ಯ ಪ್ರದೇಶಗಳಾದ ತೆಗ್ಗಿನಬಾವನೂರು ರಣತೂರು ಕಡಕೋಳ ಜಲ್ಲಿಗೇರಿ ಮಜೂರು ಮತ್ತು ಹಡಗಲಿ ಅರಣ್ಯ ಪ್ರದೇಶಗಳಲ್ಲಿ ಈಗಾಗಲೇ ಮುನ್ನೆಚ್ಚರಿಕೆಯ ಕ್ರಮವಾಗಿ ನೀರು ಹುಡುಕಿಕೊಂಡು ಗ್ರಾಮಗಳತ್ತ ನುಗ್ಗಬಾರದು ಎಂಬ ದೃಷ್ಟಿಯಿಂದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ೧೬ ಕೆರೆಗಳನ್ನು ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯ ಬರದಿಂದೆ ಸಾಗಿದೆ.
ತಾಲೂಕಿನ ರಣತೂರು ಗ್ರಾಮದಲ್ಲಿ ೧ ತಗ್ಗಿನ ಭಾವನೂರು ೧ ಕಡಕೋಳ ಅರಣ್ಯ ಪ್ರದೇಶದಲ್ಲಿ ೯ ಜಲ್ಲಿಗೇರಿ೩ ಮಜೂರು ಮತ್ತು ಹಡಗಲಿ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ತಲಾ ೧ ಒಟ್ಟು ೧೬ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ನಡೆದಿದೆ.
ಈ ಕುರಿತು ಶಿರಹಟ್ಟಿ ಪ್ರಾದೇಶಿಕ ಅರಣ್ಯ ವಲಯ ಕಚೇರಿಯ ಅಧಿಕಾರಿ ರಾಮಪ್ಪ ಪೂಜಾರ ಅವರು ಬೇಸಿಗೆ ಆರಂಭವಾಗುತ್ತಿದ್ದAತೆಯೇ ಅರಣ್ಯ ಪ್ರದೇಶಗಳಲ್ಲಿನ ಕೆರೆಗಳಲ್ಲಿನ ನೀರು ಬತ್ತಿ ಹೋಗಿರುವುದರಿಂದ ಮುಂಜಾಗ್ರತ ಕ್ರಮವಾಗಿ ಇಲಾಖೆಯು ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಪ್ಪತಗುಡ್ಡದ ಅಂಚಿನಲ್ಲಿರುವ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳಿದ್ದು ಅವುಗಳು ಆಹಾರ ಮತ್ತು ನೀರನ್ನು ಆರಿಸಿ ಗ್ರಾಮಗಳತ್ತ ನುಗ್ಗಬಾರದು ಎಂಬ ಉದ್ದೇಶದಿಂದ ಮೊದಲು ಕಾಡು ಪ್ರಾಣಿಗಳಿಗೆ ಕುಡಿಯಲು ನೀರನ್ನು ಒದಗಿಸಲು ಆದ್ಯತೆ ಕೈಗೊಳ್ಳಲಾಗಿದೆ ಎಂದರು.






















