Home ಜಿಲ್ಲೆ ಬಿಜೆಪಿ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ವಿಜಯೇಂದ್ರ ಭಾಗಿ

ಬಿಜೆಪಿ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ವಿಜಯೇಂದ್ರ ಭಾಗಿ

ಚಿಟಗುಪ್ಪ,ಮಾ ೨೨: ಬಿಜೆಪಿಯ ರಾಜ್ಯ ಸಂಘಟನಾ ವತಿಯಿಂದ ಆಯೋಜಿಸಲಾದ ಪ್ರಶಿಕ್ಷಣ ವರ್ಗಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗಮಿಸಿ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಂತರ ಚಾಂಗಲೇರಾ ಕ್ಷೇತ್ರಾಧಿಪತಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಭಿಷೇಕ ಮಾಡಿ ಆಶೀರ್ವಾದ ಪಡೆದರು. ನಂತರ ಕಾರ್ಯಕರ್ತರ ಜೊತೆ ಕೆಲ ಹೊತ್ತು ಸಂಭಾಷಣೆ ನಡೆಸಿ ಕಾರ್ಯಕರ್ತರು ಪಕ್ಷಕ್ಕೆ ಆಧಾರ ಸ್ತಂಭವಿದ್ದAತೆ, ಕಾರ್ಯಕರ್ತರು ಯಾವುದಕ್ಕೂ ಕೂಡ ಹೆದರಬಾರದು ಏನೇ ಆದರೂ ಕೂಡ ಪಕ್ಷದ ವರಿಷ್ಠರು ನಿಮ್ಮ ಜೊತೆ ಇರುತ್ತಾರೆ ಎಂದು ಧೈರ್ಯ ಹೇಳಿದರು. ಚುನಾವಣೆಯ ಹತ್ತಿರ ಬರುತ್ತಿದ್ದು ನೀವೆಲ್ಲರೂ ಹೆಚ್ಚಿನ ಸಮಯವನ್ನು ಕೊಟ್ಟು ಹೆಚ್ಚು ಸೀಟುಗಳನ್ನು ಗೆದ್ದು ಮುಂದೆ ಅಭಿವೃದ್ಧಿ ಕೆಲಸಗಳನ್ನು ಕಾರ್ಯ ಕೈಗೊಳ್ಳುವಂತೆ ತಿಳಿಸಿದರು. ಅದೇ ರೀತಿ ಕೆಲವು ಕಾರ್ಯಕರ್ತರ ಸಮಸ್ಯೆಗಳನ್ನು ಕೂಡ ಆಲಿಸಿ ಸೂಕ್ತ ಪರಿಹಾರ ನೀಡಿದರು.