
ಚನ್ನಮ್ಮನ ಕಿತ್ತೂರ,ಏ9: ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಹಾಗೂ ಭಾಷೆ ಮತ್ತು ಭಾವನಾತ್ಮಕ ಸಂಬಂಧ ಬೆಳೆಸುವಲ್ಲಿ 12 ನೇ ಶತಮಾನದ ಬಸವಾದಿ ಶರಣರ ಕೊಡುಗೆ ಅಪಾರ ಎಂದು ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಕಳಸಣ್ಣವರ ಹೇಳಿದರು
ತಾಲೂಕಿನ ಬೈಲೂರ ಗ್ರಾಮದ ನಿಷ್ಕಲ ಮಂಟಪದ ಸಭಾಭವನದಲ್ಲಿ ಕಿನಾವಿವ ಸಂಘದ ಪದವಿ ಮಹಾವಿದ್ಯಾಲಯ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು, ಸಮಾಜದ ಕಟ್ಟಕಡೆಯ ವ್ಯಕ್ತಿಯು ಆಧ್ಯಾತ್ಮದ ಅರಿವನ್ನು ಪಡೆದುಕೊಳ್ಳಲು ವಚನ ಸಾಹಿತ್ಯ ಮಹತ್ತರ ಪಾತ್ರ ವಹಿಸಿದೆ ಎಂದರು.
ಸಮಾಜಸೇವಕ ಶಿವಾನಂದ ಹನುಮಸಾಗರ ಮಾತನಾಡಿ ಯುವಜನತೆಯಲ್ಲಿ ಸೇವಾ ಮನೋಭಾವನೆ ಬೆಳೆಸುವಲ್ಲಿ ಈ ಶಿಬಿರ ಪರಿಣಾಮಕಾರಿಯಾಗಲಿದೆ ಎಂದರು. ಗ್ರಾ ಪಂ ಸದಸ್ಯ ಸಂಗಮೇಶ ಹಿರೇಮಠ ಮಾತನಾಡಿದರು. ಪತ್ರಕರ್ತ ವಿವೇಕ ಕುರಗುಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿ ಎಸ್ ವಿ ಹೊನ್ನರಾಜು ಹಾಗೂ ರವಿ ಅಗ್ನಿಹೋತ್ರಿ, ಗಂಗಾಧರ ಹನುಮಸಾಗರ, ಆನಂದ ಕರೆಪ್ಪನವರ, ವಿನಾಯಕ ಹುಬ್ಬಳ್ಳಿ, ಪ್ರಕಾಶ ಶಿವನವ್ವನವರ, ನಾಗೇಶ ಬೆಣ್ಣಿ, ವಿಜಯ ನೇಗಿನಹಾಳ ಹಾಗೂ ಇತರರಿದ್ದರು. ನಿರೂಪಣೆ ಕೀರ್ತಿ ಪಾಟೀಲ, ಸ್ವಾಗತ ಲಕ್ಷ್ಮೀ ಬಡಿಗೇರ, ಕೀರ್ತಿ ಚಿಕ್ಕಮಠ ವಂದಿಸಿದರು.






















