Home ಜಿಲ್ಲೆ ಕಲಬುರಗಿ ಖ್ವಾಜಾ ಬಂದಾ ನವಾಜ್‍ನ ಉರ್ಸ್-ಇ-ಶರೀಫ್: ಹೈದರಾಬಾದ್-ಕಲಬುರಗಿ ನಡುವೆ 4 ವಿಶೇಷ ರೈಲು

ಖ್ವಾಜಾ ಬಂದಾ ನವಾಜ್‍ನ ಉರ್ಸ್-ಇ-ಶರೀಫ್: ಹೈದರಾಬಾದ್-ಕಲಬುರಗಿ ನಡುವೆ 4 ವಿಶೇಷ ರೈಲು

ಕಲಬುರಗಿ,ಮೇ.2-ಸೋಲಾಪುರ ರೈಲ್ವೆ ವಿಭಾಗವು ಕಲಬುರಗಿಯ ಸಂತ ಖ್ವಾಜಾ ಬಂದಾ ನವಾಜರ ಉರ್ಸ್-ಇ-ಶರೀಫ್ 2026 ಗಾಗಿ ಹೈದರಾಬಾದ್ ಮತ್ತು ಕಲಬುರಗಿ ನಡುವೆ 4 ವಿಶೇಷ ರೈಲುಗಳನ್ನು ಓಡಿಸಲಿದೆ ಎಂದು ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 07177 ವಿಶೇಷ ರೈಲು 02.05.2026 ಮತ್ತು 05.05.2026 ರಂದು 23:55 ಗಂಟೆಗೆ ಹೈದರಾಬಾದಿನಿಂದ ಹೊರಟು ಮರುದಿನ 07:00 ಗಂಟೆಗೆ ಕಲಬುರಗಿಗೆ ಆಗಮಿಸುತ್ತದೆ. (2 ಟ್ರಿಪ್‍ಗಳು)
ರೈಲು ಸಂಖ್ಯೆ 07178 ಕಲಬುರಗಿಯಿಂದ 03.05.2026 ಮತ್ತು 06.05.2026 ರಂದು ಬೆಳಿಗ್ಗೆ 07:40 ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 2:00 ಕ್ಕೆ ಹೈದರಾಬಾದಿಗೆ ಆಗಮಿಸುತ್ತದೆ. (2 ಟ್ರಿಪ್‍ಗಳು)
ಈ ರೈಲು ಬೇಗಂಪೇಟ್, ಸನತನಗರ, ಹಫೀಜ್‍ಪೇಟೆ, ಲಿಂಗಂಪಳ್ಳಿ, ಶಂಕರಪಲ್ಲಿ, ವಿಕಾರಾಬಾದ್, ತಾಂಡೂರ್, ಸೇಡಂ, ಮಳಖೇಡ ರಸ್ತೆ, ಚಿತ್ತಾಪುರ ಮತ್ತು ವಾಡಿಗಳಲ್ಲಿ ನಿಲುಗಡೆ ಆಗಲಿದೆ. ಈ ರೈಲು 2 ಸ್ಲೀಪರ್ ಕ್ಲಾಸ್, 2 ಲಗೇಜ್ ಕಮ್ ಗಾರ್ಡ್‍ನ ಬ್ರೇಕ್ ವ್ಯಾನ್‍ಗಳು ಸೇರಿದಂತೆ 14 ಎರಡನೇ ದರ್ಜೆಯ ಸಿಟ್ಟಿಂಗ್ ಸೇರಿದಂತೆ ಒಟ್ಟು 16 ಕೋಚ್‍ಗಳು ಹೊಂದಿರುವುದು.
ವಿಶೇಷ ಶುಲ್ಕದ ಮೇಲೆ ವಿಶೇಷ ರೈಲುಗಳ ಪ್ರಯಾಣಕ್ಕಾಗಿ ಕಾಯ್ದಿರಿಸುವಿಕೆಗಳು ಎಲ್ಲಾ ಗಣಕೀಕೃತ ಮೀಸಲಾತಿ ಕೇಂದ್ರಗಳಲ್ಲಿ ಮತ್ತು www.irctc.co.in ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತವೆ.
ಮೀಸಲಾತಿ ಇಲ್ಲದ ಕೋಚ್‍ಗಳ ಬುಕಿಂಗ್‍ಗಳನ್ನು ನಿಲ್ದಾಣಗಳಲ್ಲಿನ ಬುಕಿಂಗ್ ಕೌಂಟರ್‍ಗಳು ಮತ್ತು ರೈಲ್‍ಒನ್ ಅಪ್ಲಿಕೇಶನ್ ಮೂಲಕವೂ ಮಾಡಬಹುದು.
ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ಅಧಿಕೃತ ಟಿಕೆಟ್‍ಗಳೊಂದಿಗೆ ಪ್ರಯಾಣಿಸಲು ವಿನಂತಿಸಲಾಗಿದೆ.
ಈ ವಿಶೇಷ ರೈಲುಗಳ ನಿಲುಗಡೆಗಳ ವಿವರವಾದ ಸಮಯಕ್ಕಾಗಿ ದಯವಿಟ್ಟು www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಖಚಿiಟಔಟಿe ಅಪ್ಲಿಕೇಶನ್ ಅಥವಾ ಓಖಿಇS ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ.