
ಕುಂದಗೋಳ ಏ.9: ತಾಲೂಕಿನ ಅನೇಕ ಗ್ರಾಮಗಳಲ್ಲಿ ಸಾರಾಯಿ ಹಾವಳಿ ಹೆಚ್ಚಾಗಿದ್ದು, ಬೆಟದೂರು ಗ್ರಾಮದಲ್ಲೂ ಕೂಡ ಎಲ್ಲೆಂದರಲ್ಲಿ ಸರಾಯಿ ಮಾರುತ್ತಿರುವುದನ್ನು ತಡೆಯಬೇಕೆಂದು ತಾಲೂಕಿನ ಬೆಟದೂರ ಗ್ರಾಮದಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅನೇಕ ಮಹಿಳೆಯರು ಸಿಇಒ ಭುವನೇಶ ಪಾಟೀಲ ಅವರಲ್ಲಿ ಮನವಿ ಮಾಡಿದರು.
ಗ್ರಾಮದಲ್ಲಿ ಸಾರಾಯಿ ಮಾರಾಟ ಹೆಚ್ಚಾಗಿದ್ದು, ಅನೇಕರು ಸರಾಯಿ ದಾಸರಾಗುತ್ತಿದ್ದಾರೆ. ಬಾಲಕರೂ ಸರಾಯಿಯತ್ತ ವಾಲುವಂತಾಗಿದೆ ಕೂಡಲೇ ನಮ್ಮ ಗ್ರಾಮದಲ್ಲಿ ಅಕ್ರಮವಾಗಿ ಸಾರಾಯಿ ಮಾರುವವರನ್ನು ಬಂಧಿಸಬೇಕೆಂದು ಒತ್ತಾಯಿಸಿದಾಗ ಸಿಇಒ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.






















