Home ಜಿಲ್ಲೆ ಕಲಬುರಗಿ ಅನಧಿಕೃತವಾಗಿ ಸವಳು ಉಪ ಖನೀಜ ಗಣಿಗಾರಿಕೆ: ಇಬ್ಬರ ವಿರುದ್ಧ ಪ್ರಕರಣ

ಅನಧಿಕೃತವಾಗಿ ಸವಳು ಉಪ ಖನೀಜ ಗಣಿಗಾರಿಕೆ: ಇಬ್ಬರ ವಿರುದ್ಧ ಪ್ರಕರಣ

ಕಲಬುರಗಿ,ಮೇ.26-ಜಿಲ್ಲೆಯ ಕಾಳಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಸವಳು ಉಪ ಖನೀಜ್ ಗಣಿಗಾರಿಕೆ ಮಾಡಿ ಸಾಗಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು, ಭೂ ವಿಜ್ಞಾನಿ, ಕಿರಿಯ ಅಭಿಯಂತರರು, ಕೋಡ್ಲಿಯ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಕೋಡ್ಲಿ ಗ್ರಾಮದ ಸರ್ವೆ ನಂ.67ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತ್ಯಾಜ್ಯ ಮಿಶ್ರಿತ ಸವಳು ದಾಸ್ತಾನು ಮಾಡಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಸದರಿ ಜಾಗದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಸಿ ದಾಸ್ತಾನು ಮಾಡಿರುವುದು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957 ಉಲ್ಲಂಘನೆಯಾಗಿರುವುದರಿಂದ ಆರೋಪಿಗಳಾದ ಕೋಡ್ಲಿ ಗ್ರಾಮದ ಹಣಮಂತ ತಂದೆ ಅಣ್ಣಪ್ಪ ಮತ್ತು ಅಬ್ದುಲ್ ರಹಿಮುದ್ದೀನ್ ತಂದೆ ಮಹೆಬೂಬಸ್ ಸಾಬ್ ವಿರುದ್ಧ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.