Home ಜಿಲ್ಲೆ ಕೊಚ್ಚಿ ಹೋಗಿರುವ ರಸ್ತೆ ಸರಿಪಡಿಸುವಂತೆ ಉಮೇಶ ಕೆ.ಮುದ್ನಾಳ ಆಗ್ರಹ

ಕೊಚ್ಚಿ ಹೋಗಿರುವ ರಸ್ತೆ ಸರಿಪಡಿಸುವಂತೆ ಉಮೇಶ ಕೆ.ಮುದ್ನಾಳ ಆಗ್ರಹ

ಸೈದಾಪುರ:ಮಾ.೧೨:ಸಮೀಪದ ಹಿರೇನೂರು, ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ ೬ ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಪ್ರವಾಹ ಬಂದು ಕಂದಳ್ಳಿ-ಹಿರೆನೂರ ೨ ಭಾಗದಲ್ಲಿ ರಸ್ತೆ ಕೊಚ್ಚಿ ಹೋಗಿ ಬೃಹತ್ ಆಕಾರದ ಗುಂಡಿಗಳು ಬಿದ್ದು, ಸಂಚಾರ ಸಂಪೂರ್ಣ ರದ್ದಾಗಿದ್ದೂ ಇಲ್ಲಿಯವರೆಗೂ ಸರಿಪಡಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ.ಕೆ. ಮುದ್ನಾಳ ಆರೋಪಿಸಿದರು.
ಗ್ರಾಮಸ್ಥರು ಹಾಗೂ ರೈತರ ಜೊತೆ ಸೇರಿ ದಿಢೀರ ಪ್ರತಿಭಟನೆ ಮಾಡಿ ಸರಿಯಾದ ಸಮಯಕ್ಕೆ ಗ್ರಾಮಗಳಿಗೆ ತಲುಪಲು ಆಗದೇ ಕುಂಟಲಿಪಿ ಆಟವಾಡುವ ಮುಖಾಂತರ ವಿನೂತನ ಪ್ರತಿಭಟನೆಯನ್ನು ಪ್ರದರ್ಶಿಸಿದರು ಸಂಬAಧಪಟ್ಟ ಅಧಿಕಾರಿಗಳು ಇಲ್ಲಿಯವರೆಗೂ ಕುಂಭಕರ್ಣ ನಿದ್ರೆಯಲ್ಲಿ ಜಾರಿದ್ದು ದುರದೃಷ್ಟಕರ ಸಂಗತಿ, ಜನತೆಗೆ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗುಂಡಿಗಳು ದೊಡ್ಡವಾಗಿ ಬದಲಾಗಿವೆ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ, ಏನಾದರೂ ಅನಾಹುತ ಸಂಭವಿಸಿದಲ್ಲಿ ಜಿಲ್ಲಾಡಳಿತ ನೇರ ಹೊಣೆಯಾಗುತ್ತದೆ ಎಂದು ಹೇಳಿದರು. ಒಂದು ವಾರದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಇಲ್ಲವಾದರೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಾಣಿಕರಡ್ಡಿ ಪಾಟೀಲ್, ಹಣಮಂತ, ಸುನೀಲ್ ಶೆಟ್ಟಿ, ಬನ್ನಪ್ಪ, ನಬಿಸಾಬ್, ಭೀಮರಾಯ, ಪವನ, ಶರಣಪ್ಪ, ಸಾಬಣ್ಣ, ಮರಿಲಿಂಗಪ್ಪ, ಮಲ್ಲಪ್ಪ, ಪ್ರಭು, ಮರೆಪ್ಪ, ಭೀಮಾಶಂಕರ, ರೆಡ್ಡೆಪ್ಪ, ಸತೀಶ, ಮೋನಪ್ಪ, ಭಾಗಪ್ಪ, ಸಿದ್ದಪ್ಪ, ಬನ್ನಪ್ಪ, ಬಸಪ್ಪ, ಮಹಾದೇವಪ್ಪ, ಹಣಮಂತ, ಜಗದೀಶ, ಬನ್ನಪ್ಪ, ಸುರೇಶ, ಚಂದ್ರು, ಶಾಂತಪ್ಪ, ಹಸೇನ, ಗಂಗು, ಅನೀಲ್, ಭೀಮಣ್ಣ, ಮೆಹಬೂಬಸಾಬ್, ಶರಣಪ್ಪ ನಿಂಗಪ್ಪ, ಕಲ್ಲಪ್ಪ, ಶಾಂತಪ್ಪ, ಮಲ್ಲಪ್ಪ, ಮರಗಪ್ಪ, ದೇವಪ್ಪ, ಬನ್ನಪ್ಪ, ಕುಮಾರ, ನರಸಪ್ಪ, ಬೂದೆಪ್ಪ, ಸುರೇಶ, ರವಿ, ತಾಯಪ್ಪ, ಭರತ ಪೀರ್ ಮಹ್ಮದ್ , ದೇವಪ್ಪ, ಶಿವಾನಂದ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ರೈತರು ಭಾಗವಹಸಿದ್ದರು.

ಪ್ರವಾಹ ಬಂದ ಮೇಲೆ ಇಲ್ಲಿಯವರೆಗೂ ಸರ್ಕಾರಿ ಬಸ್‌ಗಳ ಸಂಚಾರ ಬಂದ್ ಆಗಿದೆ. ೨ ಬದಿಯಲ್ಲಿರುವ ರೈತರೇ ಸ್ವಂತ ಹಣದಲ್ಲಿ, ರಸ್ತೆಗೆ ತಾತ್ಕಾಲಿಕ ಮುರಂ ಹಾಕಿಕೊಂಡು ಜಮೀನು & ಅಕ್ಕಪಕ್ಕದ ಗ್ರಾಮಗಳಿಗೆ ಟ್ರಾಕ್ಟರ್, ಎತ್ತಿನ ಬಂಡಿ, ವಾಹನಗಳ ಮುಖಾಂತರ ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ.
ಉಮೇಶ ಕೆ. ಮುದ್ನಾಳ ಸಾಮಾಜಿಕ ಹೋರಾಟಗಾರ