Home ಜಿಲ್ಲೆ ಕಲಬುರಗಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರಿಗೆ ತಲಾ 3 ವರ್ಷ ಜೈಲು

ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರಿಗೆ ತಲಾ 3 ವರ್ಷ ಜೈಲು

ಕಲಬುರಗಿ,ಜು 18: ನಗರದ ಚೌಕ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ್ದರಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೊಕ್ಸೋ) ನ್ಯಾಯಾಲಯವು ಇಬ್ಬರು ಅಪರಾಧಿಗಳಿಗೆ ತಲಾ 3 ವರ್ಷ ಜೈಲು ಶಿಕ್ಷೆ ಮತ್ತು ತಲಾ 55 ಸಾವಿರ ರೂ ದಂಡ ವಿಧಿಸಿದೆ.
ಮಲ್ಲಿಕಾರ್ಜುನ ಅಲಿಯಾಸ್ ಮಲ್ಲು ತಂದೆ ದಶರಥ ( 19) ಮತ್ತು ಶಿವರಾಜ ಅಲಿಯಾಸ್ ಸುರಜ್ಯಾ ದೇವಿಂದ್ರಪ್ಪ ( 20) ಶಿಕ್ಷೆಗೊಳಗಾದವರು.
ಮಲ್ಲಿಕಾರ್ಜುನನು 2025 ರ ಏಪ್ರಿಲ್ 12 ರಂದು ಬಾಲಕಿಯನ್ನು ಪರವೂರಿಗೆ ಅಪಹರಿಸಿಕೊಂಡು ಹೋಗಿ ಬಂಧನದಲ್ಲಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದ.
2025 ರ ಏಪ್ರಿಲ್ 6 ರಂದು ಶಿವರಾಜನು ಬಾಲಕಿಗೆ ಆಕೆಯ ಬೇರೆ ಲೈಂಗಿಕ ಪ್ರಕರಣದ ಬಗ್ಗೆ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೊಕ್ಸೋ) ನ್ಯಾಯಾಲಯ ನ್ಯಾಯಾಧೀಶ ಎಸ್ ಎಲ್ ಚವ್ಹಾಣ ಅವರು ತೀರ್ಪು ನೀಡಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ( ಪೊಕ್ಸೋ) ಶಾಂತವೀರ ಬಿ ತುಪ್ಪದ ಅವರು ವಾದ ಮಂಡಿಸಿದ್ದರು