
ಕಲಬುರಗಿ,ಜು.18-ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು(ಎಸ್.ಬಿ.ಆರ್.) ವಿದ್ಯಾರ್ಥಿಗಳು ನೀಟ್-2026 ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿ ಮತ್ತೊಮ್ಮೆ
ರಾಜ್ಯದ ಗಮನ ಸೆಳೆದಿದ್ದಾರೆ.
ಗುಣಮಟ್ಟದ ಬೋಧನೆ, ವೈಜ್ಞಾನಿಕ ತರಬೇತಿ ಹಾಗೂ ನಿರಂತರ ಪರೀಕ್ಷಾ ಪದ್ಧತಿಯ ಫಲವಾಗಿ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಚನ್ನಬಸವ ಕೊರಳ್ಳಿ 685/720 ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ 190ನೇ ರ್ಯಾಂಕ್ ಪಡೆದಿದ್ದು, ವಿದ್ಯಾರ್ಥಿನಿ ಸಿಮ್ರನ್ ಬಾನು 657/720 ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ 1001ನೇ ರ್ಯಾಂಕ್ ಹಾಗೂ ವಿದ್ಯಾರ್ಥಿ ರೋಹಿತ ರಾಜಕುಮಾರ 642/720 ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ 57ನೇ ರ್ಯಾಂಕ್(ಕ್ಯಾಟ್) ಪಡೆದು, ಕಾಲೇಜಿನ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಈ ವರ್ಷದಲ್ಲಿ 150 ವಿದ್ಯಾರ್ಥಿಗಳು 500 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಜೊತೆಗೆ ಈ ವರ್ಷ 950 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ವಿಭಾಗಕ್ಕೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆಂದು
ಕಾಲೇಜಿನ ಪ್ರಾಚಾರ್ಯರಾದ ಎನ್.ಎಸ್ ದೇವರಕಲ್ ಅವರು ತಿಳಿಸಿದ್ದಾರೆ.
ಈ ಬಾರಿ ಪ್ರಕಟವಾದ ಫಲಿತಾಂಶದಲ್ಲಿ 600 ಕ್ಕೂ ಹೆಚ್ಚು ಅಂಕ -14 ವಿದ್ಯಾರ್ಥಿಗಳು 575 ರಿಂದ 599 ಅಂಕ -11 ವಿದ್ಯಾರ್ಥಿಗಳು 550 ರಿಂದ 574 ಅಂಕ -22 ವಿದ್ಯಾರ್ಥಿಗಳು 525 ರಿಂದ 549 ಅಂಕ -48 ವಿದ್ಯಾರ್ಥಿಗಳು 500 ರಿಂದ 524 ಅಂಕ -57 ವಿದ್ಯಾರ್ಥಿಗಳು 475 ರಿಂದ 499 ಅಂಕ -76 ವಿದ್ಯಾರ್ಥಿಗಳು 450 ರಿಂದ 474 ಅಂಕ -58 ವಿದ್ಯಾರ್ಥಿಗಳು ಈ ಫಲಿತಾಶವು ಎಸ್.ಬಿ.ಆರ್ ಕಾಲೇಜಿನ ಶೈಕ್ಷಣಿಕ ಸಾಮಥ್ರ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದು, ಕಾಲೇಜಿನ ಅನುಭವಿ ಅಧ್ಯಾಪಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಇದು ಸಾಕ್ಷಿಯಾಗಿದೆ.
ಪ್ರಾಚಾರ್ಯರಾದ ಎನ್.ಎಸ್.ದೇವರಕಲ್ ಸರ್ ಅವರು ಹಾಗೂ ಎಲ್ಲ ಸಿಬ್ಬಂದಿಯವರು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
…………………
ಚನ್ನಬಸವ ಕೊರಳ್ಳಿ ರಾಷ್ಟ್ರಕ್ಕೆ 190ನೇ ರ್ಯಾಂಕ್, 685/720 ಅಂಕಗಳು,
ಸಿಮ್ರನ್ ಬಾನು ರಾಷ್ಟ್ರಕ್ಕೆ 1001ನೇ ರ್ಯಾಂಕ್, 657/720 ಅಂಕಗಳು,
ರೋಹಿತ ರಾಜಕುಮಾರ ರಾಷ್ಟ್ರಕ್ಕೆ 57ನೇ ರ್ಯಾಂಕ್(ಕ್ಯಾಟ್), 642/720 ಅಂಕಗಳು,
14 ವಿದ್ಯಾರ್ಥಿಗಳಿಗೆ 600 ಕ್ಕೂ ಹೆಚ್ಚು ಅಂಕ
950 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ವಿಭಾಗಕ್ಕೆ ಅರ್ಹರು
ಸಾಧಕ ವಿದ್ಯಾರ್ಥಿಗಳಿಗೆ ಆಶೀರ್ವಾದ ಹಾಗೂ ಶುಭಹಾರೈಕೆ
“ಎಸ್.ಬಿ.ಆರ್. ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷದ ನೀಟ್ ಪರೀಕ್ಷೆಯಲ್ಲಿ ದಾಖಲೆಯ ಸಾಧನೆ ಮಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಉನ್ನತ ಅಂಕಗಳನ್ನು ಗಳಿಸಿ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಪಡೆದಿರುವುದು ವಿದ್ಯಾರ್ಥಿಗಳ ಪರಿಶ್ರಮ, ಪೆÇೀಷಕರ ಸಹಕಾರ ಹಾಗೂ ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನದ ಫಲವಾಗಿದೆ. ಶರಣಬಸವೇಶ್ವರರ ಶಿಕ್ಷಣ ತತ್ವಗಳಾದ ಗುಣಮಟ್ಟ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಮಾಜಕ್ಕೆ ಆದರ್ಶ ವೈದ್ಯರಾಗಿ
ಸೇವೆ ಸಲ್ಲಿಸಲಿ ಎಂದು ಆಶಿಸುತ್ತೇನೆ.”
-ಮಾತೋಶ್ರಿ ಡಾ. ದಾಕ್ಷಾಯಿಣಿ ಅವ್ವಾಜಿ ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ
………………
“ಎಸ್.ಬಿ.ಆರ್. ಕಾಲೇಜು ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. ಈ ವರ್ಷದ ನೀಟ್ ಫಲಿತಾಂಶವು ಸಂಸ್ಥೆಯ ದೂರದೃಷ್ಟಿಯ ಯೋಜನೆ, ವೈಜ್ಞಾನಿಕ ಬೋಧನಾ ವಿಧಾನ ಮತ್ತು ವಿದ್ಯಾರ್ಥಿ ಕೇಂದ್ರಿತ ತರಬೇತಿಯ ಯಶಸ್ಸಿಗೆ ಸಾಕ್ಷಿಯಾಗಿದೆ. ನಮ್ಮ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಎಂ.ಬಿ.ಬಿ.ಎಸ್. ಪ್ರವೇಶ ಪಡೆಯಲಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಯು ಕೇವಲ ಫಲಿತಾಂಶವಲ್ಲ; ನಿರಂತರ ಪರಿಶ್ರಮ, ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣದ ಪ್ರತಿಫಲವಾಗಿದೆ. ಮುಂದಿನ ದಿನಗಳಲ್ಲಿಯೂ ರಾಷ್ಟ್ರಮಟ್ಟದ ವೈದ್ಯರನ್ನು ರೂಪಿಸುವ ನಮ್ಮ ಸಂಕಲ್ಪ ಇನ್ನಷ್ಟು ಬಲಗೊಳ್ಳಲಿ. ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಅವರ ಯಶಸ್ಸಿಗೆ ಕಾರಣರಾದ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಪೆÇೀಷಕರಿಗೆ ಅಭಿನಂದನೆಗಳು.”
-ಶ್ರಿ ಬಸವರಾಜ ದೇಶಮುಖ, ಕಾರ್ಯದರ್ಶಿಗಳು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ.
…………………….
ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕಲಬುರಗಿ,ಜು.18-ವೈದ್ಯಕೀಯ ಶಿಕ್ಷಣದ ಕೋರ್ಸ್ ಪ್ರವೇಶಾತಿಗೆ ನಡೆಸುವ “ನೀಟ್” ಪರೀಕ್ಷೆಯಲ್ಲಿ ನಗರದ ಎಸ್‍ಬಿಆರ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
720ಕ್ಕೆ 685 ಅಂಕ ಗಳಿಸಿದ ಚನ್ನಬಸವ ಕೊರಳ್ಳಿ ಕಾಲೇಜು ಹಾಗೂ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾನೆ. ಅಲ್ಲದೇ ಅಖಿಲ ಭಾರತ 190ನೇ ರ್ಯಾಂಕ್ ಗಳಿಸಿದ್ದಾನೆ. 657 ಅಂಕ ಪಡೆದ ಸಿಮ್ರಾನ್ ಬಾನು ಜುನೈದಿ ಕಾಲೇಜಿಗೆ ದ್ವಿತೀಯ ಹಾಗೂ ಅಖಿಲ ಭಾರತ 1,002ನೇ ರ್ಯಾಂಕ್ ಪಡೆದಿದ್ದಾರೆ.
ನವೀನ್ ಮಿಟೆಕರ್ ಹಾಗೂ ಸಂಪತಕುಮಾರ ಕಲಶೆಟ್ಟಿ ತಲಾ 650 ಅಂಕ ಪಡೆದು ಕಾಲೇಜಿಗೆ ಜಂಟಿ ಮೂರನೇ ಟಾಪರ್‍ಗಳಾಗಿ ಹೊರ ಹೊಮ್ಮಿದ್ದಾರೆ. ಇನ್ನು, ರೋಹಿತ ಪಟೊಳ್ಳಿ 642 ಅಂಕ ಸಾಧನೆ ಮಾಡಿದ್ದು, ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 57ನೇ ರ್ಯಾಂಕ್ ಪಡೆದಿದ್ದಾರೆ.
ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅತ್ಯುತ್ತಮ ರ್ಯಾಂಕ್‍ಗಳಿಸಿದ ಐವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ಸತ್ಕರಿಸಲಾಯಿತು.
ಶರಣಬಸವೇಶ್ವರ ಸಂಸ್ಥಾನದ ಅಧ್ಯಕ್ಷೆ ಮಾತೋಶ್ರಿ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಸಾಧಕ ವಿದ್ಯಾರ್ಥಿಗಳಿಗೆ ಪೇಟಾ ತೊಡಿಸಿ ಹಾಗೂ ಶಾಲು ಹೊದಿಸಿ ಶರಣಬಸವೇಶ್ವರ ಭಾವಚಿತ್ರ ನೀಡಿ ಗೌರವಿಸಿದರು.
ಎಸ್‍ಬಿಆರ್ ಕಾಲೇಜಿನ ಮೇಲ್ವಿಚಾರಕ ಶ್ರೀಶೈಲ ಹೊಗಾಡೆ, ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ದೇಶಮುಖ ಸೇರಿದಂತೆ ಹಲವರು ಇದ್ದರು.






























